ಬೆಸ್ಟಾದ ಬೀಸ್ಟೀ ಬೆಸ್ಟ್

ಮುಂಬಯಿ ನಗರಿಗೆ ಬೇಕಿರುವ ಎರಡು ಅತ್ಯಾವಶ್ಯಕ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯ ಹೆಸರು ಬೆಸ್ಟ್, ಎಂದರೆ ಬಾಂಬೇ ಎಲೆಕ್ಟ್ರಿಕಲ್ ಸಪ್ಲೈ ಅಂಡ್ ಟ್ರಾನ್ಸ್‍ಪೋರ್ಟ್.   ಇದರಲ್ಲಿ ಎರಡು ವಿಭಾಗಗಳಿವೆ.  ಒಂದು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ನೋಡಿಕೊಂಡರೆ ಇನ್ನೊಂದು ನಗರ ಸಂಚಾರಕ್ಕೆ ಬಸ್ಸುಗಳ ವ್ಯವಸ್ಥೆಯನ್ನು ನೋಡಿಕೊಳ್ಳುವುದು.  ಎರಡೂ ವ್ಯವಸ್ಥೆಗಳನ್ನು ಸುವ್ಯವಸ್ಥೆಯಾಗಿಟ್ಟಿರುವುದಕ್ಕೆ ಸರಿಯಾಗಿ ಆಂಗ್ಲದಲ್ಲಿ ಇದನ್ನು ಬೆಸ್ಟ್ ಎಂದು ಕರೆಯುವರೇನೋ ತಿಳಿಯದು.

ಈ ನಗರ ಸಂಚಾರದ ಬಸ್ಸುಗಳ ವಿಭಾಗದ ಬಗ್ಗೆ ನನ್ನ ಕೆಲವು ಮಾತುಗಳನ್ನು ನಿಮ್ಮ ಮುಂದಿಡಬಯಸುವೆ. 

ಒಟ್ಟು ೨೫ ಬಸ್ ಡಿಪೋಗಳಿರುವ ಈ ಸಂಸ್ಥೆಯು ೩೩೫ ರೂಟ್‍ಗಳಲ್ಲಿ ೩,೩೮೦ ಬಸ್ಸುಗಳನ್ನು ಓಡಿಸುತ್ತಿದೆ. 

ತಮಾಷೆಯಾದ ಒಂದು ವಿಷಯವೆಂದರೆ – ಇಲ್ಲಿ ಓಡುವ ರೂಟ್ ನಂ ೧೬೬ ನೇ ಬಸ್ಸು ಹೆಚ್ಚಿನ ಆಸ್ಪತ್ರೆಗಳನ್ನು ಹಾದು ಹೋದರೆ, ರೂಟ್ ನಂ ೧೬೧ ತೈಲಾಗಾರಗಳು ಮತ್ತು ಮುಂಬಯಿ ಜನನಿಬಿಡ ಪೂರ್ವಪ್ರದೇಶದಲ್ಲಿ ಹಾದು ಹೋಗುವುದು.  ಇದೇ ತರಹ ರೂಟ್ ನಂ ೯ ಹೆಚ್ಚಿನ ಶಾಲಾಕಾಲೇಜುಗಳನ್ನು ಹಾಯ್ದುಹೋದರೆ, ರೂಟ್ ನಂ ೧, ೬೬, ಮತ್ತು ೨೦೨ ದಿನದ ೨೪ ಘಂಟೆಗಳೂ ಸೇವಾನಿರತವಾಗಿರುವುದು. 

ಇಂತಹ ಬೆಸ್ಟ್ ಬಸ್ಸುಗಳಲ್ಲಿ ಬಹಳ ಮಹಡಿ ಬಸ್ಸುಗಳಿದ್ದವು (ಡಬಲ್ ಡೆಕರ್).  ಆದರೆ ಈಗ್ಯೆ ೫-೬ ತಿಂಗಳುಗಳಿಂದ ಡಬಲ್ ಡೆಕರ್‍ಗಳು ಮಾಯವಾಗುತ್ತಿವೆ.  ಅದರ ಬದಲಿಗೆ ಹೊಸ ಹೊಸ ಬಸ್ಸುಗಳು ಬಂದಿವೆ.  ಅಂಗವಿಕಲರೂ ಬಹಳ ಸುಲಭದಲ್ಲಿ ಹತ್ತುವಂತೆ ಕೆಳಮಟ್ಟದಲ್ಲಿವೆ.  ಇವುಗಳಲ್ಲಿ ಎಫ್‍ಎಮ್ ಚಾನೆಲ್ ಸಂಗೀತವನ್ನು ಹಾಕುವರು.  ಅದಲ್ಲದೇ ಬಸ್ಸಿನಿಂದಲೇ ದೂರವಾಣಿ ಕರೆಯನ್ನೂ ಮಾಡಬಹುದು.  ಈ ಬಸ್ಸುಗಳಿಗೆ ಇಂಜಿನ್ ಹಿಂಭಾಗದಲ್ಲಿರುವುದು.  ಗ್ಯಾಸ್ ಮೂಲಕ ಓಡಿಸುವ ಬಸ್ಸುಗಳೂ ಬಹಳ ಇವೆ. 

ಕೆಲವು ಬಸ್ಸುಗಳ ನಂಬರ್ ಕೆಂಪು ಬಣ್ಣದ್ದಿದ್ದರೆ ಇನ್ನು ಕೆಲವದ್ದು ಬಿಳಿ ಬಣ್ಣದ್ದಿರುವುದು.  ಬಿಳಿ ಬಣ್ಣದ ಸಂಖ್ಯೆ ಸಾಧಾರಣ ಬಸ್ಸುಗಳದ್ದಾದರೆ, ಕೆಂಪು ಬಣ್ಣಗಳದ್ದು, ವಿಶೇಷ, ನಿಯಮಿತ ಮತ್ತು ಪಾಯಿಂಟ್ ಟು ಪಾಯಿಂಟ್ ಓಡುವ ಬಸ್ಸುಗಳು.    ಕೆಲವು ರೂಟ್‍ಗಳಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನೂ ಓಡಿಸುವರು. 

ಬೇರೆಯ ಊರುಗಳಿಗೆ ಹೋಲಿಸಿದರೆ ಇಲ್ಲಿಯ ಬಸ್ಸುಗಳ ದರ ಬಹಳ ಹೆಚ್ಚಿರುವುದು.  ಅತಿ ಕಡಿಮೆ ದರ ರೂಪಾಯಿ ೪ ಆದರೆ, ದೂರಕ್ಕೆ ತಕ್ಕಂತೆ ೧೬ ರಿಂದ ಇಪ್ಪತ್ತು ರೂಪಾಯಿಗಳವರೆವಿಗೂ ದರವಿರುವುದು.  ಹವಾ ನಿಯಂತ್ರಿತ ಬಸ್ಸುಗಳಲ್ಲಿ ರೂಪಾಯಿ ೩೫ ರಿಂದ ೬೫-೭೦ ರೂಪಾಯಿಗಳವರೆವಿಗೆ ದರವಿರುವುದು. 

ಇತ್ತೀಚೆಗೆ ಬಿಂಡಿ ಬಜಾರಿನಲ್ಲಿ ಒಂದು ಬಸ್ಸು ಒಬ್ಬ ಮುದುಕಿಗೆ ಡಿಕ್ಕಿ ಹೊಡೆದು ಅವಳು ಸಾವನ್ನಪ್ಪಿದಳು.  ಕೆಲವು ದಿನಗಳ ಹಿಂದೆ ಕೊಲಾಬಾದ ಬದ್‍ವಾರ್ ಪಾರ್ಕಿನ ಬಳಿ ಬೆಳಗಿನ ಜಾವ ಹೋಗುತ್ತಿದ್ದ ಬಸ್ಸೊಂದು ಹಾದಿ ತಪ್ಪಿ ಫುಟ್‍ಪಾತ್ ಹತ್ತಿ ರಸ್ತೆಯಲ್ಲಿ ಮಲಗಿದ್ದ ೪ ಜನಗಳ ಕಾಲುಗಳ ಮೇಲೆ ಹಾದು ಹೋಗಿತ್ತು.  ಈ ಸುದ್ದಿಯನ್ನು ಕೇಳಿದ ಕೂಡಲೇ ನನಗೆ ನೆನಪಾದದ್ದು ಶಂಕರನಾಗ್ ಅವರ ಆಕ್ಸಿಡೆಂಟ್ ಚಿತ್ರ. 

ಬಿಟಿಎಸ್‍ಗೂ ಮತ್ತು ಬೆಸ್ಟ್‍ಗೂ ಇರುವ ವ್ಯತ್ಯಾಸ ಮತ್ತು ಸಾಮ್ಯತೆ

Advertisements

5 ಟಿಪ್ಪಣಿಗಳು

 1. ಆಗಷ್ಟ್ 11, 2006 at 7:41 ಫೂರ್ವಾಹ್ನ

  ನಮೋ ವೆಂಕಟೇಶಾ…. ನಮೋ ಶ್ರೀನಿವಾಸಾ…. ಏಳು ಬೆಟ್ಟದ ಒಡೆಯಾ…

  ಸೂಪರ್ ಬೊಗಳೆರೀ….
  ಯಾವಾಗ ಹುಟ್ಟಿದ್ದು… 🙂

 2. ಆಗಷ್ಟ್ 11, 2006 at 7:51 ಫೂರ್ವಾಹ್ನ

  ನಿನ್ನೆ ಹುಟ್ಟಿದ್ದು. ಆಶ್ರಯದ ಕೈ ಕಾಲು ಮುರೀತೀನಿ ಅಂತ ಯಾರೋ ಧಮಕಿ ಕೊಟ್ರು. ಹಾಗಾಗೋದು ಬೇಡಾಂತ ಇನ್ನೊಂದು ಮನೆ ಮಾಡಿಕೊಂಡೆ.

 3. sritri said,

  ಆಗಷ್ಟ್ 17, 2006 at 4:21 ಫೂರ್ವಾಹ್ನ

  ಹೊಸ ಮನೆಗೆ ಬಂದಿದೀರಾ? ಬನ್ನಿ . ನಿಮ್ಮ ಮನೆಗೆ ನಿಮಗೇ ಸುಸ್ವಾಗತ 🙂

 4. ಮನ said,

  ಆಗಷ್ಟ್ 17, 2006 at 4:47 ಫೂರ್ವಾಹ್ನ

  ನಮಸ್ಕಾರ ತವಿಶ್ರೀಯವರೇ,

  ವರ್ಡ್‌ಪ್ರೆಸ್ ಕಾಲೋನಿಯಲ್ಲಿ ಸೈಟ್ ತಗೊಂಡು ಮನೆನೂ ಕಟ್ಟಿಸ್ಬಿಟ್ಟಿದ್ದೀರ. 🙂
  ಗೃಹಪ್ರವೇಶ ಹೇಗಾಯಿತು?

  [B]ಹೊಸಬ್ಲಾಗಿನ ಹೊಸಿಲಲಿ ನಿಂತಿರುವ,
  ತವಿಶ್ರೀಯವರಿಗೆ ಶುಭವಾಗಲಿ[/B]

  [ಶ್ರಾವಣಬಂತು ಚಿತ್ರದ ಅಣ್ಣಾವ್ರು ಹಾಡಿರುವ ಹಾಡಿನ ಹಿನ್ನೆಲೆಯಲ್ಲಿ 🙂 ]

  ಬರಹಗಳು ಎಂದಿನಂತೆ ನಿರಂತರವಾಗಿ ಸಾಗಲಿ,
  ಮನ

 5. ಆಗಷ್ಟ್ 17, 2006 at 5:18 ಫೂರ್ವಾಹ್ನ

  ನಮ್ಮ ಮನೆಯೊಳಗೆ ನಮಗಿಂತ ನೀವೇ ಮೊದಲು ಬಂದು ಎದುರುಗೊಂಡದ್ದಕ್ಕೆ ವಂದನೆಗಳು ಮೇಡಂ.

  ಅಣ್ಣಾವ್ರ ಈ ಸೂಪರ್ ಹಾಡನ್ನು ನನಗಾಗಿ ಹಾಡಿದ ಮನಕ್ಕೆ ನಮಸ್ಕಾರಗಳು. ವರ್ಡ್‍ ಪ್ರೆಸ್ ನವರು ಪುಕ್ಕಟೆ ನಿವೇಶನ ಕೊಡ್ತೀನಿ ಅಂತ ಘೋಷಿಸಿದ್ರು. ನನಗೂ ಸ್ವತಂತ್ರವಾಗಿರಲು ಮನೆ ಕಟ್ಟಬೇಕೆಂಬ ಹಂಬಲವಿತ್ತು. ನನ್ನ ಬರಹವನ್ನು ಮೆಚ್ಚುವ ದೇವರುಗಳಿಗೆ (ನಮ್ಮ ಅಣ್ಣಾವ್ರ ಡೈಲಾಗ್) ನಾನು ಮೋಸ ಮಾಡೋಲ್ಲ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: