ವಿಭಾಗಗಳು
ಕವನಗಳು

ಗಣಪತಿ ಆರತಿ

aarati.jpg

ಮಹಾರಾಷ್ಟ್ರದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮಂಗಳಾರತಿಯ ಸಮಯದಲ್ಲಿ
ಹಾಡುವ ಸುಂದರ ಭಜನೆ – ಕರ್ತೃ ಯಾರೆಂದು ತಿಳಿಯದು

ಸುಖಹರ್ತಾ ದು:ಖಹರ್ತಾ ವಾರ್ತಾ ವಿಘ್ನಾಚೀ
ನುರವೀ ಪುರವೀ ಪ್ರೇಮ ಕೃಪಾ ಜಯಾಚೀ
ಸರ್ವಾಂಗೀ ಸುಂದರ ಉಟಿ ಶೆಂಟೂರಾಚೀ
ಕಂಠೀ ಝಳಕೇ ಮಾಲ ಮುಕ್ತಾ ಫಳಾಚೀ

ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ ಜಯ ಮಂಗಲ ಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ

ರತ್ನಖಚಿತ ಫರಾ ತುಜ ಗೌರಿಕುಮರಾ
ಚಂದನಾಚೀ ಉಟೀ ಕುಂಕುಮಕೇಶರಾ
ಹಿರೆಜಡಿತ ಮುಕುಟ ಶೋಭತೊ ಬರಾ
ಋಣಝುಣಗೀ ನೂಪುರೇ ಚರಣೀ ಘಾಗರಿಯಾ

ಜಯದೇವ ಜಯದೇವ
ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ

ಲಂಬೋದರ ಪೀತಾಂಬರ ಫಣಿವರಬಂಧನಾ
ಸರಲ ಸೋಂಡ ವಕ್ರತುಂಡ ತ್ರಿನಯನಾ
ದಾಸ ರಾಮಾಚಾ ವಾಟ ಪಾಹೆ ಸದನಾ
ಸಂಕಟೀ ಪಾವಾವೇಂ, ನಿರ್ವಾಣೀಂ ರಕ್ಷಾವೇಂ ಸುರವರ ವಂದನಾ

ಜಯದೇವ ಜಯದೇವ
ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ

ಜಯದೇವ ಜಯದೇವ
ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ

ವಿಭಾಗಗಳು
ಕವನಗಳು

ಜೋಡು

kolhapuri-chappals.jpg

ಇರಲಾರೆ ಒಬ್ಬಂಟಿಯಾಗಿ ನಾನೆಂದೂ
ಪಕ್ಕದಲ್ಲಿರಬೇಕು ಸಹಚರ ಎಂದೆಂದೂ
ಸಹವರ್ತಿ ಇಲ್ಲದೇ ಎನ್ನ ಬಾಳಿಲ್ಲ
ಯಜಮಾನರ ಸೇವಿಸುವುದೇ ಜೀವನವೆಲ್ಲ

ನಮ್ಮಲೂ ಉಂಟು ಹಲವು ಜಾತಿ ಧರ್ಮ
ಕೆಲವರು ಹೊಡೆತಕೆ ಉಪಯೋಗಿಸುವುದು ನನ ಕರ್ಮ
ನಮ್ಮ ಹೇಗೆ ಉಪಯೋಗಿಸುವರೋ ಅದೊಂದು ಮರ್ಮ
ಹಿಂದೆಲ್ಲಾ ನಮಗಾಧಾರ ಪ್ರಾಣಿಯ ಚರ್ಮ

ನಮ್ಮಲಿ ಕೆಲವರಿಗೆ ಪ್ರತಿದಿನ ಪಾಲೀಷಿನ ಮಾಲೀಷು
ಚಿನ್ನದ ರೇಕಿನಲಿ ಹುಟ್ಟುವುದು ಕೆಲವು ಶೂಸು
ಮಕ್ಕಳ ಮಾಲಿನಲಡಗಿದೆ ಸೈರನ್ನು
ಆಗಾಗ ನನಗೆ ಚುಚ್ಚುವುದು ಪಿನ್ನು

ಚರ್ಮದ ಕೆಳಗೆ ಹುಗಿದಿಹುದು ಕೆಲವರ ನೋಟು
ಮೆರೆವವರಿಗೆ ನನ್ನದೇ ಮುಂದಾದ ಸಾರೋಟು
ನಾನಿಲ್ಲದೇ ಗೌರವ ತರದು ಮಂದಿಯ ಕೋಟು
ನನ್ನ ಬಳಗದವರಿಂದಲೇ ಕೊಡುವುದು ಛಡಿ ಏಟು

ನನ್ನವರು ಕೆಲವರ ಸೇವೆ ಅಡುಗೆ ಮನೆ
ಹೆಚ್ಚಿನವರ ಡ್ಯೂಟಿ ಪಾಯಖಾನೆ
ಅರಮನೆಯಲೂ ನಾನಿಲ್ಲದ ಜೀವವಿಲ್ಲ
ಭಿಕಾರಿಗೂ ನಾನು ಬೇಕೇ ಬೇಕಲ್ಲ

ಕೆಲವರಿಗೆ ಹಣೆಯ ಮೇಲೆ ಸುಂದರ ಉಂಗುರ
ಕೆಲವರದು ಕೊಲ್ಹಾಪುರಿಯ ಸದ್ದು ಚರಚರ
ಬೂತಯ್ಯನನ್ನೂ ಎಡಬಿಡದೆ ಸೇವಿಸಿದೆ
ಜಂಗಮಯ್ಯನನ್ನು ನಂಬಿ ನಾ ಎಡವಿದೆ

ನನಗೆ ಪೂರ್ಣ ದರದ ಕಟ್ಟದು ಬಾಟಾ
ಎಲ್ಲರ ಸಂರಕ್ಷಿಸುವುದು ನನಗೆ ಮಾತ್ರ ಕಾಟ
ಆಗಾಗ ನನಗೂ ಆಗುವುದು ಆಪರೇಷನ್ನು
ಯಾರಾದರೂ ನೆನೆವರೇ ನನ್ನ ಕಥೆಯನ್ನು

ವಿಭಾಗಗಳು
ಕವನಗಳು

ಬಾಳಿನ ಪಯಣ

ಎಲ್ಲಿಯೋ ಹುಟ್ಟಿ ಬೆಳೆದು ಬಂದಿರುವೆ ನನ್ನ ಬಾಳ ದೋಣಿಯಲಿ
ದೀಪದಂತೆ ಬೆಳಗುತಿರುವೆ ನನ್ನ ಮನೆಯ ಹೊಸ್ತಿಲಲಿ
ಇಬ್ಬರೂ ಕೂಡಿ ಈ ಸಂಸಾರ ಸಾಗರದಲಿ ಈಸುವಾ
ಜೊತೆ ಜೊತೆಯಾಗಿ ಕೈ ಹಿಡಿದು ಬಾಳಿನಲಿ ಜೈಸುವಾ

ನಾನಾಗುವೆ ನಿನಗಾಸರೆಯ ಮಾವಿನ ಮರ
ನೀನಾಗಿರು ನನ್ನ ಜೊತೆಗೂಡುವ ಬೇವಿನ ಮರ
ಮಾವು ಬೇವುಗಳೆರಡನ್ನೂ ಸಮನಾಗಿ ಸೇವಿಸುವಾ
ಸುಖ ದು:ಖ ಸಮನಾಗಿ ಹಂಚಿ ಬಾಳ ದೋಣಿ ಸಾಗಿಸುವಾ

ಈ ಸಂಸಾರವೆಂಬ ಸಾಗರದಲಿ ನಮ್ಮ ದೋಣಿ ತೇಲಲಿ
ಎಷ್ಟೇ ಕಷ್ಟ ನಷ್ಟಗಳು ಎದುರಾದರೂ ಮುಳುಗದಿರಲಿ

ನೂರೆಂಟು ಅಲೆಗಳ ಭೋರ್ಗರೆತ ತಡೆದು ಮುನ್ನುಗ್ಗೋಣ
ಎದುರಾಗುವ ಕಾರ್ಪಣ್ಯಗಳ ಬಗ್ಗು ಬಡಿಯೋಣ

ಈ ನನ್ನ ಜೀವನಸಾಗರದ ಪಯಣದಲಿ ನೀನಾಗು ಸಾಥಿ
ನಾ ನಿನ್ನೊಡನೆ ಎದುರಿಸುವೆ ಎಲ್ಲ ತರಹದ ಭೀತಿ
ಮುಂದೆ ಈ ಸಾಗರಕೆ ಎರೆಯೋಣ ಮಕ್ಕಳೆಮ್ಬ ಹನಿಯ ಋಣ
ಪುನರಾವರ್ತಿತವಾಗಿ ಅವರಿಂದ ಸಾಗಲಿ ಈ ಬಾಳಿನ ಪಯಣ

ವಿಭಾಗಗಳು
ಕವನಗಳು

ಆತ್ಮ ಚಿರಾಯು

ಆತ್ಮ ಚಿರಾಯು
ಅದಕಿಲ್ಲ ಸಾವು ನೋವಿನ ಅಂಟು
ಆತ್ಮ ಅಪರಂಜಿ
ಲವಲೇಶ ಕಲುಷಿತವಲ್ಲದ ಚಿನ್ನ

ಕಬ್ಬಿಣಕ್ಕೆ ತಗುಲುವುದು ತುಕ್ಕು
ದೇಹಕೆ ಬರುವುದು ಸುಕ್ಕು
ಜಡ ವಸ್ತುಗಳೂ ಕುಗ್ಗುವುದು
ಹಿಗ್ಗು ಕುಗ್ಗು ಅಗೋಚರವಿದು

ಪಂಚಭೂತಗಳಿಗಿಲ್ಲ ರೂಪ
ಆದರೂ ತೋರಿಸುವುದು ಪ್ರತಾಪ
ಗಿಂಡಿ ಹೇಗಿದ್ದರೇನಂತೆ
ಉಳಿಯುವುದು ಆಕಾರದಂತೆ

ಪಂಚಭೂತಗಳಲ್ಲೂ ಆತ್ಮ
ತಿಳಿ ಅದರಲಿರುವುದೇ ಪರಮಾತ್ಮ
ಈ ಜೀವಾತ್ಮಕೆ ಹೊರತಾದುದೆಲ್ಲವೂ ಪರಮಾತ್ಮ
ಅದನು ಅರಿಯುವವನೇ ಮಹಾತ್ಮ

ವಿಭಾಗಗಳು
ಕವನಗಳು

ಕನ್ನಡಮ್ಮ

ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ
ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ

೫೦ ವಸಂತಗಳ ಕಳೆಯುತಿಹ ತಾಯಿ
ಇವಳ ಬಹು ಮಕ್ಕಳದು ಬರಿಯ ಬಡಾಯಿ
ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು
ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು

ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ
ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ
ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು
ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು

ಪರರ ಮಕ್ಕಳದೇ ಎಲ್ಲಾ ಕಾರುಬಾರು
ಬಹು ಮಕ್ಕಳೆಲ್ಲಾ ಇವರ ದಾಸರು
ಕೆಲ ಮಕ್ಕಳಷ್ಟೇ ತಾಯ ಮಾನ ಕಾಪಾಡಹತ್ತಿಹರು
ಆಗಲಿ ಇವರ ಕೈ ಬಲ ಪಡಿಸುವುದಕ್ಕೆ ನಮ್ಮ ಕರಾರು

ಇಂದಿನ ಕನ್ನಡದ ಸ್ಥಿತಿ ನೋಡಿಯೂ ನೋಡದಂತಿರುವವರೇ ಬಹು ಮಕ್ಕಳು
ಅವಳ ಕಷ್ಟವರಿತು ಕಾಪಾಡಲು ಮುಂದೆ ಬಂದಿರುವವರೇ ಕೆಲ ಮಕ್ಕಳು