ನನ್ನ ಬಗ್ಗೆ …

ನನ್ನ ಮುಸುಡಿ


ನನ್ನ ಮೂಲ ತಳುಕಿನ ವಂಶ. ತಳುಕು ಇರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕಿನಲ್ಲಿ. ಚಳ್ಳಕೆರೆಯಿಂದ ಬಳ್ಳಾರಿಯ ರಸ್ತೆಯಲ್ಲಿ ೧೫ ಕಿಲೋಮೀಟರ್ ದೂರದಲ್ಲಿರುವ ಹಳ್ಳಿ.
ನಮ್ಮ ಮನೆಯ ಮಾತು ತೆಲುಗು. ಆದರೂ ಕನ್ನಡ ಭಾಷೆಗೆ ನಮ್ಮ ಕುಟುಂಬದೊಂದಿಗಿರುವ ನಂಟಿನ ಮುಂದೆ ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ. ನನ್ನ ಮೊದಲನೆಯ ದೊಡ್ಡಪ್ಪನವರು ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದ ತಳುಕಿನ ವೆಂಕಣ್ಣಯ್ಯನವರು. ಪ್ರಸಿದ್ಧ ಕಾದಂಬರಿಕಾರರಾಗಿದ್ದ ತ.ರಾ.ಸುಬ್ಬರಾಯರು ಎರಡನೆಯ ದೊಡ್ಡಪ್ಪನವರ ಮಗ, ಅಂದರೆ ನನಗೆ ಅಣ್ಣ. ಇನ್ನೊಬ್ಬ ದೊಡ್ಡಪ್ಪನವರಾದ ತ.ಸು.ಶಾಮರಾಯರೂ ಕನ್ನಡದ ಪ್ರೊಫೆಸರ್ ಆಗಿದ್ದವರು. ಇದು ನನ್ನ ತಂದೆಯ ತಂದೆಯ ಕಡೆಯ ಕನ್ನಡ ಸಾಹಿತ್ಯ ಲೋಕದ ಸಂಬಂಧವಾದರೆ, ನನ್ನ ತಂದೆಯ ತಾಯಿಯ ತಮ್ಮ ಅಂದರೆ ಸೋದರಮಾವನವರಾಗಿದ್ದ ಕನ್ನಡ ಪ್ರೊಫೆಸರ್ ಕೆ.ವೆಂಕಟರಾಮಪ್ಪನವರು ನನಗೆ ತಾತನವರು. ಅವರು ತೆಲುಗುವಿನ ಹಲವು ಪ್ರಸಿದ್ಧ ಗ್ರಂಥಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಾಗೆಯೇ ಹಳಗನ್ನಡದಲ್ಲಿ ಹೆಚ್ಚಿನ ಅಧ್ಯಯನ ಮಾಡಿದವರು. ಇನ್ನು ನನ್ನ ತಂದೆಯ ತಂಗಿಯವರಲ್ಲೊಬ್ಬರಾದ ವಿಶಾಲಾಕ್ಷಿ ದಕ್ಷಿಣಾಮೂರ್ತಿ ನನ್ನ ಸೋದರತ್ತೆ. ಆಕೆಯೂ ಪ್ರಸಿದ್ಧ ಕಾದಂಬರಿಗಾರ್ತಿ.ನನ್ನ ಬಗ್ಗೆ ಹೇಳಬೇಕೆಂದರೆ,ನನ್ನ ಹೆಸರು ತಳುಕು ವಿಶ್ವೇಶ್ವರಯ್ಯ ಶ್ರೀನಿವಾಸ ಎಂದು.
ಹುಟ್ಟಿದ್ದು ಜೋಗದ ಹತ್ತಿರದ ಲಿಂಗನಮಕ್ಕಿಯಲ್ಲಿ (೧೯೬೦ ರ ಮೇ ೨ರಂದು).
ನನ್ನ ತಂದೆಯ ಹೆಸರು ವಿಶ್ವೇಶ್ವರಯ್ಯ ಮತ್ತು ತಾಯಿ ಗಂಗಭಾಗೀರಥಮ್ಮ. ೧೯೭೮ರಿಂದ ೧೯೮೦ ರವರೆವಿಗೆ ಬೆಂಗಳೂರಿನ ಶಂಕರಮಠದ ಶಂಕರ ಸ್ಕೂಲ್ ಆಫ್ ಕಲ್ಚರ್ ನಲ್ಲಿ ವಾಸ. ಅಲ್ಲಿ ಗುರುಗಳ ಸನ್ನಿಹಿತದಲ್ಲಿ ವೇದಾಧ್ಯಯನ ಮಾಡಿದೆ. ಹಾಗೆಯೇ ಆಚಾರ್ಯ ಪಾಠಶಾಲೆಯಲ್ಲಿ ಬಿ.ಕಾಂ. ಪದವಿಗಾಗಿ ಓದಿದೆ. ಬಿ.ಕಾಂ ಪದವಿಯನ್ನು ಮೊದಲ ದರ್ಜೆಯಲ್ಲಿ ೧೯೮೦ರಲ್ಲಿ ಪಡೆದೆ. ಮುಂದೆ ೧೯೮೦ರಲ್ಲಿ ಸ್ವಲ್ಪ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದು ೧೯೮೧ ನವೆಂಬರ್ ನಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸ ಮಾಡಿದೆ. 
೧೯೮೨ರಲ್ಲಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ನಾಣ್ಯ ಪರೀಕ್ಷಕನಾಗಿ ಸೇರಿದೆ. ೧೯೮೯ರಲ್ಲಿ ಅಸಿಸ್ಟೆಂಟ್ ಮ್ಯಾನೆಜರಾಗಿ ಮುಂಬಯಿಗೆ ವರ್ಗವಾಗಿ ಬಂದೆನು. ೧೯೯೭ರಲ್ಲಿ ಮ್ಯಾನೇಜರಾಗಿ ಬೆಂಗಳೂರಿಗೆ ವರ್ಗವಾಗಿ ಹೋಗಿದ್ದು, ತದನಂತರ, ೨೦೦೨ರಲ್ಲಿ ಮುಂಬಯಿಗೆ ಮರುವರ್ಗವಾಗಿ ಬಂದು, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು.  ೨೦೧೨ರಲ್ಲಿ ಚೆನ್ನೈಗೆ ವರ್ಗವಾಗಿ ಬಂದಿರುವೆ.  ೨೦೧೩ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ ಬಡ್ತಿ ದೊರೆಯಿತು.  

ನಾನೊಬ್ಬ ಸಾಹಿತ್ಯಾಭಿಲಾಷಿ. ನನ್ನ ಬರವಣಿಗೆ ಹೆಚ್ಚಿನದಾಗಿ ಕನ್ನಡದಲ್ಲಿಯೇ ಇರುವುದು. ಬರೆಯುವುದು ನನ್ನ ಹುಚ್ಚುತನಗಳಲ್ಲಿ ಒಂದು. ಅಲ್ಲಿಲ್ಲಿ ಕಥೆ, ಕವನ, ಲೇಖನಗಳನ್ನು ಪ್ರಕಟಿಸುತ್ತಿರುವೆ. 

Advertisements

33 ಟಿಪ್ಪಣಿಗಳು

 1. pragna said,

  ಸೆಪ್ಟೆಂಬರ್ 24, 2006 at 2:01 ಅಪರಾಹ್ನ

  Nimma Blog thumba chennagide.
  Nanu nanna hosa dada account open madidenne
  kanndalli post madalu kelavu salahegalanu needidare
  upayogavadithu

 2. ಸಂತೊಷ್. said,

  ಅಕ್ಟೋಬರ್ 13, 2006 at 2:04 ಫೂರ್ವಾಹ್ನ

  ನಮಸ್ಕ್ರಾರ ಶ್ರೀನಿವಾಸ,

  ನಿಜ ಹೆಳಬೆಕೆಂದರೆ, ನಾನು ನಿಮ್ಮ ಬ್ಲೊಗಗಳನ್ನು ಜಾಸ್ತಿ ಒದಿಲ್ಲ.
  ಸುಮ್ನೆ worpress ನಲ್ಲಿ ಬ್ರೊವಸ ಮಾಡ್ತಾ ಇದ್ದೆ.

  ಆದರೆ ನನಗೆ ನಿಮ್ಮ profile ನಲ್ಲಿ ಒಂದು ವಾಕ್ಯ ತುಂಬ ಮೆಚ್ಹುಗೆ ಆಯ್ತು.
  ಕನ್ನಡ ಭಾಷೆಗೆ ನಮ್ಮ ಕುಟುಂಬದೊಂದಿಗಿರುವ ನಂಟಿನ ಮುಂದೆ ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ.

  ಈ ಮಾತು ಕರ್ನಾಟಕ ದಲ್ಲಿ ಇರುವ ಏಲ್ಲರಿಗು ಅರ್ಥ ಅಗಬೆಕು ಅಂತ ನನ್ನ ಆಸೆ.
  ಆಸೆ ಮಾತ್ರ , ಒತ್ತಾಯ ಅಲ್ಲ .

  ಯಾಕೆಂದರೆ , ನವು ಏಸ್ಟೂ ದಶಕಗಳಿಂದ ಈ ನಾಡಲ್ಲಿ ಬಾಳಿ ಬದಕ್ಕುತ್ತಾ ಇದ್ದೆವೆ.
  ಮುಂಚೆ ನಮ್ಮ ಬಾಷೆ ಯಾವದಾದರು ಇರಲಿ , ಈಗ ನಾವು ಕನ್ನಡವನ್ನು ಮಾತ್ರಬಾಷೆಯಾಗಿ ಮಾಡಿಕೊಂಡು , ವಿಶಾಲ ಕನ್ನಡಿಗರಾಗಿ , ವಿಶಾಲ ಕರ್ನಾಟಕ ಸ್ತಾಪಿಸಬೆಕಾಗಿದೆ.

  ಆಯಿತು , ನಿಮ್ಮ ಬ್ಲೊಗ ಬರೆಯುವ ಯಶಸ್ವಿಯಾಗಿ ಮುಂದುವರೆಯಲಿ ಏಂದು ಹಾರೈಸುತ್ತಾ ನನ್ನ ಪತ್ರವನ್ನು ಮುಗಿಸುತ್ತೆನೆ.

  ದನ್ಯವಾದಗಳು.
  ಸಂತೊಷ್.

 3. vani said,

  ಅಕ್ಟೋಬರ್ 21, 2006 at 11:18 ಫೂರ್ವಾಹ್ನ

  namaskAra shrInivAs,

  nimma warD^pres bagge tiLidiralilla. bahaLa sogasAgide. nimma dIpAvaLiya bagegina lEkhana mAhiti pUrNavAgide, bhAShe, shaili, vivaraNe bahaLa cennAgide.

  bAv^bIc idu, nAnu muMbayiyalli idda kAraNa tiLidittu. adu bhAv^bId athavA bhAvibIc yAvudu sari? tiLisi.

  nimma paricayadalli kannaDabhASheya bagegina abhimAna bahaLa cennAgi tiLiyapaDisiddIri.

  vishvAsadiMda,
  vANi

 4. Ram said,

  ನವೆಂಬರ್ 30, 2006 at 5:15 ಅಪರಾಹ್ನ

  Prithiya Srinivasa Avarige,

  Thumba chennagide. Neevu T Venkannayyanavara vamshaja endu tilidu thumba santoshavayitu. Avara bagge, shriman DVG avaru thumba chennagi barediddare.

 5. Nagaraj Achar said,

  ಜನವರಿ 11, 2007 at 1:03 ಅಪರಾಹ್ನ

  ನಿಮ್ಮ “ನಾವ್ಯಾಕೆ ಹೀಗೆ” ಪದ್ಯ ತುಂಬಾ ಚನ್ನಾಗಿ ಮತ್ತು ಅರ್ಥಪೂರ್ಣವಾಗಿದೆ.

 6. Manjunatha said,

  ಫೆಬ್ರವರಿ 9, 2007 at 10:03 ಫೂರ್ವಾಹ್ನ

  namaskAra,
  taMMa parichaya aaddadu tuMbA saMtOShavAitu.
  iShToMdu jana khyAtanAmara hinnele hoMdiruva neevu kannaDakke innoo hechchina koDuge needuvaMtAgali eMdu hAraisuttEne.
  Manjunatha.K.S

 7. Veena said,

  ಫೆಬ್ರವರಿ 14, 2007 at 7:49 ಅಪರಾಹ್ನ

  tumba chennagide sir nimma kannada blog.
  padhya ellinda ashtond rachisteera antha gottagalla.. olle poem churner neevu!
  Keep it going

  -Veena Shivanna

 8. Satish joshi said,

  ಮಾರ್ಚ್ 2, 2007 at 5:01 ಅಪರಾಹ್ನ

  Nimma Blog thumba chennagide

 9. Keshavamurthy said,

  ಏಪ್ರಿಲ್ 7, 2007 at 6:50 ಅಪರಾಹ್ನ

  ನಮಸ್ಕ್ಕಾರ ಶ್ರೀನಿವಾಸ್ ರವರೆ…ನಿಮ್ಮ ಪರಿಚಯ ನನಗೆ ತುಂಬಾ ಉಲ್ಲಾಸ ಮತ್ತು ಆಸಕ್ತಿ ಹೆಚ್ಚಿಸಿದೆ..ನಿಮ್ಮ ಆಶಿರ್ವಾದ ನನ್ನ ಮೇಲೆ ಸದಾ ಇರಲಿ ಎಂದು ನಾನು ನಿಮ್ಮಲ್ಲಿ ಕೇಳಿಕೋಳ್ಳುತ್ತೇನೆ…

  ಇಂತಿ
  ಕೇಶವಮೂರ್ತಿ

 10. TSSM said,

  ಏಪ್ರಿಲ್ 27, 2007 at 4:45 ಅಪರಾಹ್ನ

  Namaskara

  Neevu Talukina vamshadavarendu keli bahala santoshavaayithu.

  T.S.Shamaraya avara ‘mooru talemarugalu’ odidhene.Bahala chennagide. Avara mathu T.S.Venkannaiah navara bagge swalpa bareyutheera?

  Dhanyavadagalu.

 11. archana said,

  ಏಪ್ರಿಲ್ 30, 2007 at 4:18 ಅಪರಾಹ್ನ

  wonderful blog!! keep it up!!

 12. ಮೇ 22, 2007 at 7:58 ಅಪರಾಹ್ನ

  ನಮಸ್ಕಾರ ಶ್ರೀನಿವಾಸರೆ,

  ಮುಂಬೈ ನಲ್ಲಿ, ’ ಆಪ್ ಕೊ ಪುರುಸೊತ್ ಮೆ ಬನಾಯ ಹೈ ’ ಎಂದು ಒಳ್ಳೆ ರೂಪವತಿ ಹೆಣ್ಣಿಗೆ, ಸಾಮಾನ್ಯವಾಗಿ ನಮ್ಮ ಪ್ರಿಯೆಗೆ, ಹೇಳುವ ಮಾತು. ನಿಮ್ಮ ಬ್ಲಾಗ್ ನೋಡಿದಮೇಲೆ ನನಗೇಕೋ ಆತರಹ ಹೆಳ್ಬೇಕೇನೊ ಅನ್ನಿಸ್ತಿದೆ ! ಸಿಗೋಣ. ಇದು ಒಳ್ಳೇ ಕಾಮೆಂಟಾ ?

  ಹಾ. ನೀವು ಹೇಳಿದ್ರಲ್ಲ. ಟೆಕ್ಸ್ಟೈಲ್ಸ್ ಮೇಲೆ ಏನಾದ್ರು ಬರೀರಿ ಅಂತ. ಅದನ್ನೇ ಮಾಡಿದೀನಿ. ನೋಡಿ ನಿಮ್ಮ ಕಾಮೆಂಟ್ಸ್ ಕೊಡಿ ಸಾರ್. ಇಲ್ಲಿ ಹರಿಯವರಿಗೆ ಬಿಟ್ರೆ ಯಾರ್ಗೂ ಅದ್ರಲ್ಲಿ ಆಸಕ್ತಿ ಇಲ್ಲ ಅಂತ ಕಾಣಿಸ್ತಿದೆ.

  ವೆಂಕಟೇಶ್

 13. ಶ್ರೀನಿವಾಸ ಸಿ.ಟಿ. said,

  ಜುಲೈ 13, 2007 at 10:47 ಅಪರಾಹ್ನ

  ಮಾವ…! ನಿಮ್ಮ ಸ್ಕ್ರಾಪ್ ತುಂಬಾ ಚೆನ್ನಾಗಿದೆ. ಸಾಹಿತ್ಯದ ಗಂಧ ನಿಮಗೂ ಖಂಡಿತ ಬೀಸಿದೆ.

 14. Satish said,

  ಆಗಷ್ಟ್ 2, 2007 at 1:50 ಫೂರ್ವಾಹ್ನ

  Nimma blog tumba chennagide. Sumarusala oddidini. Unfortunately I have some constraints due to which I’ve postponed my kannada blog writing. Your blogs are simple, understandable and follow a good narration. Keep up the good work…

  Regards,
  Satish

 15. dinesh said,

  ಅಕ್ಟೋಬರ್ 10, 2007 at 6:26 ಅಪರಾಹ್ನ

  nimma blog nodi santhosh aythu…

 16. bharat kumar said,

  ಡಿಸೆಂಬರ್ 6, 2007 at 10:14 ಅಪರಾಹ್ನ

  hello sir
  i saw your blog its so nice. once visit our kannad website http://www.chitharadurga.com give the feed back

  thanking you
  bhrath kumar

 17. bharat kumar said,

  ಡಿಸೆಂಬರ್ 6, 2007 at 10:16 ಅಪರಾಹ್ನ

  hello sir
  i saw your blog its so nice. once visit our kannad website http://www.chitharadurga.com give the feed back

 18. ಮಾರ್ಚ್ 7, 2008 at 11:07 ಫೂರ್ವಾಹ್ನ

  ನಮಸ್ಕಾರ್ರಿ ಸರ್ರsss…

  ನಿಮ್ಮ ಲೇಖನಗಳನ್ನು ಬಹಳಷ್ಟು ಸಾರಿ ಇಗೋ ಕನ್ನಡದಲ್ಲಿ ಓದಿದ್ದೆ, ಪ್ರಮುಖವಾಗಿ ಮುಂಬಯಿ ಲೇಖನಗಳು. ನಿಮ್ಮ ಬ್ಲಾಗ್ ಗೆ ಬಂದಿದ್ದು ಇದೆ ಮೊದಲು, ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ, ಲೇಖನಗಳು ಸೊಗಸಾಗಿವೆ. ನಾನೂ ಕೂಡಾ ಮುಂಬಯಿಯಲ್ಲೆ ಇರೋದು.

  ಸ್ನೇಹವಿರಲಿ

  ಶೆಟ್ಟರು

 19. sindhu said,

  ಮಾರ್ಚ್ 28, 2008 at 11:09 ಫೂರ್ವಾಹ್ನ

  ta.vi.shree sir,

  nim blog parichaya kendasampigeli bandide. 🙂

  preetiyinda
  sindhu

 20. amara said,

  ಏಪ್ರಿಲ್ 2, 2008 at 3:02 ಅಪರಾಹ್ನ

  ಏನಪ್ಪ ಇದು ಗುರುಗೊಳ್ಗೇ ಯದ್ವ ತದ್ವ ರೇಸ್ಪಾನ್ಸು ಬತ್ತಾಯ್ತೆ ….. ಎಲ್ಲಾ ಕೆಂಡಸಂಪಿಗೆಯಮ್ಮನ ಮಹಿಮೆಯಾ?????

  ಒಲವಿನಿಂದ
  -ಅಮರ

 21. nraj0605 said,

  ಮೇ 4, 2008 at 7:59 ಅಪರಾಹ್ನ

  ¸Ágï, PÀ£ÀßqÀzÀ°è §gÉ0iÉÆÃgÀÄ, NzÉÆÃgÀÄ, CzÀæ®Æè EAl£Éðlß°è…. w½zÀÄ §ºÀ¼À ¸ÀAvÉÆõÀªÁ¬ÄvÀÄ.

 22. Raveendra said,

  ಆಗಷ್ಟ್ 27, 2008 at 3:01 ಅಪರಾಹ್ನ

  Sir,

  Nijwaaglu nimma bagge thiLkoLoke kuthoohala ittu…. NImma blog nodi thumba kushi aythu….. Sir…. Nanna punya nim jothe sneha maadirodu annustide….

  Nimma kannada abhimaanakke nanna Hats off…. [:)]

  R @ V E E

 23. aaa said,

  ಆಗಷ್ಟ್ 27, 2008 at 9:43 ಅಪರಾಹ್ನ

  ಸಾರ್, ಕನ್ನಡದಲ್ಲಿ ಬರೆಯೋರು, ಓದೋರು, ಅದ್ರಲ್ಲೂ ಇಂಟರ್ನೆಟ್ನಲ್ಲಿ.॒ ತಿಳಿದು ಬಹಳ ಸಂತೋಷವಾಯಿತು.

 24. Saanvi said,

  ನವೆಂಬರ್ 4, 2008 at 12:34 ಅಪರಾಹ್ನ

  namaskara sir
  nimma blog nodi kushi aytu ,nimge kannada da bagge iruva askthi nodi tumbane santhosha aytu sir . nimma paricheya agidu nanna bagya sir

  Thanks n regards
  saanvi

 25. ಜನವರಿ 30, 2009 at 7:12 ಅಪರಾಹ್ನ

  ಪ್ರಿಯರೇ, ಈಗಷ್ಟೇ ಹೊಸದಾಗಿ ನನ್ನ ಬಂಧುವಾದ ಶ್ರೀ ಅರುಣ್ ಅವರಿಂದ ನಿಮ್ಮ ಬ್ಲಾಗಿನ ಪರಿಚಯ ಆಯ್ತು.
  ಹೀಗೆ ಆಗೀಗ ಬ್ಲಾಗಿಸುತ್ತಿರೋಣ. ನಮಸ್ಕಾರ.

 26. Dr. Azad said,

  ಜೂನ್ 9, 2009 at 11:44 ಅಪರಾಹ್ನ

  ನಮಸ್ಕಾರ ಶ್ರೀನಿವಾಸ್ ಸರ್
  ಬಹಳ ಘನತೆವೆತ್ತ ಕೌಟುಂಬಿಕ ಹಿನ್ನೆಲೆಯನ್ನು ನಾನು ನೋಡದೇ ನಿಮಗೆ ನನ್ನ ಅನಿಸಿಕೆಗಳನ್ನು ತಿಳಿಸಿದ್ದರೆ ನೈಜವಾಗಿರುತ್ತಿತ್ತು…ಆದರೆ ಈಗ ಮುಜುಗರ ಅನ್ನಿಸುತ್ತಿದೆ ಹಾಗೇ..ನಿಮ್ಮ ಬ್ಲಾಗಿನ ಸಂಪರ್ಕದಲ್ಲಿರಬೇಕೆಂಬ ಬಯಕೆಯಿಂದ ಪ್ರತಿಕ್ರಿಯಿಸಲೇಬೇಕಾಗಿದೆ…
  ನನ್ನ ಬ್ಲಾಗ್ ಗೂ ಬನ್ನಿ ಸರ್, ನಿಮ್ಮ ಅಮೂಲ್ಯ ಸಲಹೆಗೆ ಸ್ವಾಗತ….(ನನ್ನ ಮನೆ ಮಾತು…ಉರ್ದು…).

 27. minchulli said,

  ಆಗಷ್ಟ್ 24, 2009 at 4:27 ಅಪರಾಹ್ನ

  nimma blog kooda ivathu nodide… poorthi oodilla … adaroo oodida ellavoo khgushi kodthu… innu baruve yaavaagalooo

 28. ವಿ ಕೃಷ್ಣಮೊರ್ತಿ ಅಜ್ಜಹಳ್ಳಿ said,

  ಜನವರಿ 6, 2010 at 3:01 ಅಪರಾಹ್ನ

  nimma ellaa blog naanu odide tuMbaa sogasaagide
  danyavaadagalu.

 29. shambhu said,

  ಜನವರಿ 26, 2010 at 5:18 ಅಪರಾಹ್ನ

  good taste

 30. ಜನವರಿ 26, 2010 at 5:19 ಅಪರಾಹ್ನ

  msg m e9880347105

 31. ರಾಜೀವ್ said,

  ಜೂನ್ 1, 2010 at 2:57 ಅಪರಾಹ್ನ

  ನಿಮ್ಮ ಎಲ್ಲಾ ಬ್ಲೋಗ್ ನಾನು ಓಡಿದೆ ತುಂಬಾ ಸೊಗಸಾಗಿದೆ,ನಿಮ್ಮ ಕವನಗಳು ಅದ್ಭುತ,ಹೀಗೆ ಮುಂದುವರಿಸಿ, ದಾನ್ಯವಾದಗಳು.

 32. nikhiljoisr said,

  ಆಗಷ್ಟ್ 29, 2012 at 3:49 ಅಪರಾಹ್ನ

  I hope you’re still active here. I was doing some random family research and came upon this blog. I happen to be Talak Adishesha Jois’s grandson, he was TaRaSu’s cousin if I’m not mistaken.
  I shall read through your blog at leisure and reply when I’m home and have access to a kannada script software 🙂

 33. ಅಕ್ಟೋಬರ್ 21, 2012 at 5:15 ಅಪರಾಹ್ನ

  very good blog.though i am retired , nanage phurusottu aguvude illaa~ yakoo gottillaa. adaruu aagiiga tastisuttiddene. by mukundachiplunkar@gmail.com hassan


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: