ಚಟ

ಅಂದು ದಿನವೆಲ್ಲ ಕಾಲೇಜಿನಲಿ ಆಟಗಳ ಚಟ
ಸಂಜೆಯಾದೊಡೆ ಬೀದಿ ಬೀದಿ ತಿರುಗುವ ಚಟ
ರಾತ್ರಿಯೆಲ್ಲ ಎಡಬಿಡದೆ ಓದುವ ಚಟ
ಮತ್ತೆ ಬೆಳಗ್ಗೆ ಕೂತಲ್ಲೆಲ್ಲಾ ತೂಕಡಿಸುವ ಚಟ

ಮರುವರುಷ ಕೆಲಸಕ್ಕಾಗಿ ಅರ್ಜಿ ತಳ್ಳುವುದೇ ಚಟ
ದಿನಂಪ್ರತಿ ಸಂದರ್ಶನ ಕೊಡುವುದೇ ಚಟ
ಸಿಕ್ಕ ಸಿಕ್ಕ ಗೆಳೆಯರೆಲ್ಲರಿಂದ ಸಾಲ ಪಡೆಯುವ ಚಟ
ಅವರಿಂದ ತಪ್ಪಿಸಿಕೊಳ್ಳಲು ಕಲಿತೆ ಸುಳ್ಳು ಹೇಳುವ ಚಟ

ಕೆಲಸ ಸಿಕ್ಕೊಡನೆ ಮನೆ ಬಿಟ್ಟು ಹೊಟೆಲ್ ತಿಂಡಿಗಳ ಚಟ
ಹಾಳು ಮೂಳು ತಿಂದು ಅಪ್ಪ ಅಮ್ಮರ ಬೈಗುಳ ತಿನ್ನುವ ಚಟ
ಬೀದಿಗೆ ಬಿಟ್ಟ ಬಸವನಂತೆ ಹುಡುಗಿಯರ ಹಿಂದೆ ಹೋಗುವ ಚಟ
ಬೆಪ್ಪು ಮುಖಕ್ಕೆ ಯಾರೂ ಸಿಗದೆ ಸಿಗರೇಟು ಕುಡಿತಗಳ ಚಟ

ಸಂಸಾರ ಜವಾಬ್ದಾರಿ ಹೊತ್ತೊಡನೆ ಮನೆ ಸೇರದಿರುವುದೇ ಚಟ
ಅಕ್ಕ ಪಕ್ಕದ ಮನೆಗಳ ಕಡೆ ಇಣುಕಿ ನೋಡುವುದೇ ಚಟ
ಪತ್ನಿ ಮಕ್ಕಳ ಕೈಗೆ ಸಿಕ್ಕು ಬೈಸಿಕೊಳ್ಳುವುದೂ ಆಯ್ತು ಚಟ
ಅಂದು ಓರ್ಕುಟ್ಟಿಗೆ ಅಂಟಿದುದೊಂದು ಚಟ
ಇಂದು ಫೇಸ್ಬುಕ್ಕಿನಲಿ ಅಲೆಯುವುದೊಂದು ಚಟ
ಇನ್ನೂ ಬರಲಿಲ್ಲ ಶ್ರೀಹರಿಯ ನೆನೆಯುವ ಚಟ 😛

Read more at: http://kannada.oneindia.in/literature/poem/2005/120705talaku.html

Advertisements