ಕನ್ನಡಮ್ಮ

images (2)

 

 

ಆರು ಕೋಟಿ ಮಕ್ಕಳ ತಾಯಿ ಕನ್ನಡಮ್ಮ

ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ

 

57 ವಸಂತಗಳ ಕಳೆಯುತಿಹ ತಾಯಿ

ಇವಳ ಬಹು ಮಕ್ಕಳದು ಬರಿಯ ಬಡಾಯಿ

ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು

ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು

 

ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ

ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ

ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು

ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು

 

ಪರರ ಮಕ್ಕಳದೇ ಎಲ್ಲಾ ಕಾರುಬಾರು

ಬಹು ಮಕ್ಕಳೆಲ್ಲಾ ಇವರ ದಾಸರು

ಕೆಲ ಮಕ್ಕಳಷ್ಟೇ ತಾಯ ಮಾನ ಕಾಪಾಡಹತ್ತಿಹರು

ಆಗಲಿ ಇವರ ಕೈ ಬಲ ಪಡಿಸುವುದಕ್ಕೆ ನಮ್ಮ ಕರಾರು

 

ಇಂದಿನ ಕನ್ನಡದ ಸ್ಥಿತಿ ನೋಡಿಯೂ ನೋಡದಂತಿರುವವರೇ ಬಹು ಮಕ್ಕಳು

ಅವಳ ಕಷ್ಟವರಿತು ಕಾಪಾಡಲು ಮುಂದೆ ಬಂದಿರುವವರೇ ಕೆಲ ಮಕ್ಕಳು …

 

ಎಲ್ಲ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭ ಆಶಯಗಳು