ಇಬ್ಬಂದಿ ಭಾವನೆ

ಸಣ್ಣವರೊಂದಿಗೆ ಸಣ್ಣವನಾಗಿ ಸೇರಿದರೆ, ತಲೆ ಮೇಲೆ ಕೂತ್ಕೊಳ್ತಾರೆ ಅಥವಾ ಅವರಿಗಿಂತಾ ಇನ್ನೂ ಸಣ್ಣವನನ್ನಾಗಿ ತಿಳೀತಾರೆ, ತಾವು ಮಾತ್ರ ದೊಡ್ಡವರಾಗ್ತಿದ್ದೀವಿ ಎಂದು ಭಾವಿಸ್ತಾರೆ. ಅವರು ಸರಿ ಅಂತ ನಾನು ಒಪ್ಪಿಕೊಳ್ಳಲಾಗಲ್ಲ, ಯಾಕೆ ಅಂದ್ರೆ, ನನ್ನ ಬೆನ್ನಿನ್ನೂ ಬಾಗಿಲ್ಲ, ತಲೆ ಇನ್ನೂ ಮೇಲೆತ್ತರಕ್ಕೆ ನೋಡುವ ಶಕ್ತಿ ಹೊಂದಿದೆ.

ದೊಡ್ಡವರೊಂದಿಗೆ ದೊಡ್ಡವನಾಗಿ ಸೇರಿದರೆ, ಇಲ್ಲ ಸಲ್ಲದ ತಪ್ಪುಗಳನ್ನು ಹುಡುಕಿ, ಗೌಣವಾಗಿ ಕಾಣ್ತಾರೆ. ಅವರೊಂದಿಗೆ ನಿಲ್ಲಲು ನಾನು ಅಸಮರ್ಥ ಅಂತ ನಿರೂಪಿಸಲು ಹವಣಿಸ್ತಿರ್ತಾರೆ.

ಹೀಗಾದ್ರೆ ನಾನಿನ್ನು ಹೇಗೆ ಉಳಿಯೋದು, ಬೆಳೆಯೋದು?

Advertisements

ಕಾಕಣ್ಣ/ ಮ್ಮ (ಬಾದರಾಯಣ ಸಂಬಂಧಿ)

crowಸುಮಾರು ತಿಂಗಳುಗಳಿಂದ, ನಮ್ಮ ಮನೆಯ ಅಡುಗೆ ಮನೆಯ ಕಿಟಕಿಯ ಹತ್ತಿರ, ಪ್ರತಿ ನಿತ್ಯವೂ ೮ ಘಂಟೆಯ ವೇಳೆಗೆ ಒಂದು ಕಾಗೆ ಬಂದು ಕುಳಿತುಕೊಳ್ಳುತ್ತದೆ.  ಅದಕ್ಕೆ ತಿನ್ನಲೇನಾದರೂ ಹಾಕಲೇಬೇಕು.   ಅಲ್ಲಿಯವರೆವಿಗೂ ಕಾ ಕಾ ಅಂತ ಅರಚುತ್ತಲೇ ಇರುತ್ತದೆ.  ಮೊದ ಮೊದಲಿಗೆ ಬಿಸ್ಕತ್ ತಿನ್ನುತ್ತಿದ್ದದ್ದು, ನಂತರ ಅದು ಬಿಸ್ಕತ್ ಮುಟ್ಟದಾಯಿತು.   ಮನೆಯಲ್ಲಿ ಮಾಡಿದ ಅಂದಿನ ತಿಂಡಿಯೇ ಹಾಕಬೇಕು.  ಅದನ್ನು ಕಚ್ಚಿಕೊಂಡ ಮೇಲೆಯೇ ಹಾರಿ ಹೋಗುವುದು.  ಕೆಲವೊಮ್ಮೆ ಇನ್ನೊಂದು ಕಾಗೆಯೂ ಬರುತ್ತದೆ.  ಪೂರ್ವಜನ್ಮದಲ್ಲಿ ಇದೇನಾದರೂ ನಮ್ಮ ಸಂಬಂಧಿ ಆಗಿತ್ತೇ ಎಂಬ ಅನುಮಾನ ನನಗೆ.  ವರುಷಕ್ಕೊಮ್ಮೆ ಶ್ರಾದ್ಧದ ದಿನ ಪೂರ್ವಜರಿಗೆ ಪಿಂಡ ಇಡುವುದು ವಾಡಿಕೆ.  ಇಲ್ಲಿ ಪ್ರತಿ ನಿತ್ಯವೂ ಅದಕ್ಕೆ ತಿನ್ನಲಿಡಬೇಕು.   ಮನಸ್ಸಮಾಧಾನ ಆಗಲು ಇದೊಂದು ಸದವಕಾಶ ಅನ್ನುವಿರಾ?

ಮತ್ತೆ ಬರಹ

ಬಹಳ ದಿನಗಳಿಂದ ಬರಹದ ಕಡೆಗೆ ಗಮನ ಕೊಡಲಾಗಲಿಲ್ಲ.   ಅದಕ್ಕೂ ಒಂದು ಕಾರಣವಿದೆ.   ಪದೋನ್ನತಿಯ ಕಡೆಗೆ ೩ ವರುಷಗಳ ಕಾಲ ಹಟಪ್ರಯತ್ನ ಮಾಡುವಾಗ, ಬರಹವನ್ನು ಗೌಣ ಮಾಡಬೇಕಾಯ್ತು.  ಕೈ ಹಿಡಿದ ಕೆಲಸ ಮುಗಿದ ಮೇಲೆ, ಮತ್ತೆ ಮನದಲ್ಲಿ ಮೂಡಿದ್ದನ್ನು ಬರಹದ ಮೂಲಕ ವ್ಯಕ್ತ ಪಡಿಸುವುದು ಕರ್ತವ್ಯವಲ್ಲವೇ!   ಇನ್ಮೇಲೆ ಬರಹಕ್ಕೆ ಪ್ರಾಧಾನ್ಯ ಕೊಡುವೆ.