ಅಂತರಾಳದ ಅನಿಸಿಕೆ

ನಾ ಬಿರಿದ ಹೂ
ನೀ ಹಸಿದ ದುಂಬಿ
ಎಮ್ಮದೆಲ್ಲಿಗೆಲ್ಲಿಯ ನಂಟು?
ನಮ್ಮಿಬ್ಬರಲಿರುವುದು ವೈರತ್ವವೋ?
ಸ್ನೇಹವೋ?
ಎನ್ನ ರಸವ ಹೀರುವುದು ನಿನ್ನ ಕರ್ಮ
ನಿನ್ನ ಪಾದ ಸ್ಪರ್ಶಕೆ ಹಾತೊರೆವುದು ನನ್ನ ಧರ್ಮ
ಜಗಕೆ ಬೇಕಿಹುದು
ನಾವಿಬ್ಬರು ಕೂಡಿಡುವ ಗಂಟು

ಕಷ್ಟಕಾಲಕೆ ಕೂಡಿಡುವುದು
ನಮ್ಮ ಧರ್ಮ
ಸುಲಭದಲಿ ಅದ ಕಳೆದುಕೊಳ್ಳುವುದೂ
ನಮ್ಮ ಕರ್ಮ
ಪ್ರತಿ ಸಲವೂ ನನ್ನ ನಿನ್ನ
ಸಮುದಾಯವ ಮೋಸಿಸುವರೇ
ಈ ಮಹಾಜನರು
ನಮ್ಮ ಕುಡಿಕೆಯು ಅವರದೇ ಆಸ್ತಿ
ಎಂದು ತಿಳಿದವರು

ಎನ್ನ ಮಕರಂದವೇ ನಿನಗೆ ಆಸರೆ
ನೀ ಮಾಡುವ ಪರಾಗ ಸಂಚಲನೆಗೇ ಎನ್ನ ಕಾತರ
ಎನ್ನ ಸಂತತಿಯ ಬೆಳವಣಿಗೆಯ ನಿನ್ನ ಧರ್ಮ
ಜಗಕೆ ಆಸರೆಯ ನೀಡುವುದೇ ನಮ್ಮೀರ್ವರ ಕರ್ಮ

ಕಾಣದ ದೇವನ ಮುಡಿಗೆ ಎನ್ನದೇ ಅಲಂಕಾರ
ಅಭಿಷೇಕಕೆ ನಿನ್ನದೇ ಮಧುವಿನ ಪರಿಕಾರ
ನಾವಿಬ್ಬರೂ ಕೂಡಿ ಸಾರಬಹುದೇ ಸಮರ
ಆಗಲಿ ಸರಿಯೇ ನಮ್ಮೀರ್ವರ ಹೆಸರು ಅಮರ

ಕೊಡು ನಿನ್ನ ಸಮ್ಮತಿ!
ಮಾಡುವೆ ಮಧುವ ವಿಷದ ಬಟ್ಟಲು
ಮೊನಚು ಕೊಂಡಿಯಿಂದ ಆತನಲಿ ಜಾರಲು
ಕಾಣುವನು ಹಂತಕನು ಕೊನೆ ಗತಿ

Advertisements

6 Comments

 1. ನಾರಾಯಣ್ said,

  October 20, 2008 at 1:52 pm

  ಪದ್ಯವು ಸಮರ್ಪಕವಾಗಿದೆ ಸರ್ . ಈಗಿನ ಎಕ್ಕಾನಾಮಿಯ ಲಾಗವನ್ನು ಸರಿಯಾಗಿಯೇ ಬಿಂಬಿಸಿದೆ.

 2. ವಿಜಯರಾಜ್ ಕನ್ನಂತ said,

  October 20, 2008 at 5:02 pm

  Nice and meaningful 🙂

 3. kallare said,

  October 21, 2008 at 5:42 pm

  ಕಾಣದ ದೇವನ ಮುಡಿಗೆ ಎನ್ನದೇ ಅಲಂಕಾರ.. prati saalugalu chennagive.

  arthapoorna kavana
  best,

 4. October 21, 2008 at 6:22 pm

  ನಾರಾಯಣ ಶಾಸ್ತ್ರಿಗಳಿಗೆ, ವಿಜಯಕಾಂತರಿಗೆ ಮತ್ತು ಕಲ್ಲರಮನೆ ಮಹೇಶರಿಗೆ ಧನ್ಯವಾದಗಳು – ಈ ಕವನವನ್ನು ಚಿತ್ರಕವನದಲ್ಲಿ ಮೊದಲು ಪ್ರಕಟಿಸಿದ್ದು. ಇಲ್ಲಿ ಇದರ ಪುನರಾವರ್ತನೆ

 5. October 25, 2008 at 8:56 pm

  ಕಷ್ಟಕಾಲಕೆ ಕೂಡಿಡುವುದು
  ನಮ್ಮ ಧರ್ಮ
  ಸುಲಭದಲಿ ಅದ ಕಳೆದುಕೊಳ್ಳುವುದೂ
  ನಮ್ಮ ಕರ್ಮ
  ಪ್ರತಿ ಸಲವೂ ನನ್ನ ನಿನ್ನ
  ಸಮುದಾಯವ ಮೋಸಿಸುವರೇ
  ಈ ಮಹಾಜನರು
  ನಮ್ಮ ಕುಡಿಕೆಯು ಅವರದೇ ಆಸ್ತಿ
  ಎಂದು ತಿಳಿದವರು

  ಎಷ್ಟು ನಿಜವಾದ ಮಾತು ! ಕವನ ನಿಜವಾಗಿಯೂ ಅತ್ಯಂತ ಮನೋಜ್ಞವಾಗಿದೆ.

 6. Prasadini shetty said,

  December 6, 2008 at 4:03 pm

  kavana antaraalada manobhavane chennaagi alediddira. odidadahtu kadimeyenisuttade


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: