ಬ್ಲಾಗ್ ಆಕ್ಷನ್ ಡೇ

http://maavinayanasa.blogspot.com has joined the bloggers group and this articles has been uploaded there

 

ಅಕ್ಟೋಬರ್ ೧೫ನೆಯ ತೇದಿಯಂದು  ಎಲ್ಲ ಬ್ಲಾಗಿಗರೂ ಒಂದೇ ವಿಷಯದ ಮೇಲೆ ಬರೆಯುವುದೆಂದು ಆಕ್ಷನ್ ಡೇ ರವರು (http://blogactionday.org/)  ನಿರ್ಧರಿಸಿದ್ದಾರೆ.  ವಿಶ್ವದಲ್ಲಿ ಹಲವು ಭಾಷೆಗಳಲ್ಲಿ, ಹಲವು ವಿಷಯಗಳ ಬಗ್ಗೆ, ಬರಹಗಾರರು ತಮ್ಮ ತಮ್ಮ ಚಿಂತನೆಗಳನ್ನು ಬ್ಲಾಗುಗಳ ಮೂಲಕ ಬರೆದು ಓದುಗರ ಮನವನ್ನು ತಲುಪುತ್ತಿದ್ದಾರೆ.   ಈ ಸಂದರ್ಭದಲ್ಲಿ ಎಲ್ಲ ಬ್ಲಾಗಿಗರೂ ಒಂದೇ ವಿಷಯದ ಬಗ್ಗೆ ಅಕ್ಟೊಬರ್ ೧೫ರಂದು ತಮ್ಮ ತಮ್ಮ ಬ್ಲಾಗುಗಳಲ್ಲಿ ಬರೆಯೋಣ ಎಂದು ನಿರ್ಧರಿಸಲಾಗಿದೆ.  ಒಂದೇ ವಿಷಯ?  ಯಾವ ವಿಷಯದ ಬಗ್ಗೆ ಬರೆಯಬೇಕು?  ೨೦೦೦ ಬ್ಲಾಗಿಗರಿಗೆ ಯಾವ ವಿಷಯದ ಬಗ್ಗೆ ಬರೆಯುವಿರಿ?’ ಎಂದು ಕೇಳಿದರೆ, ೨೦೦೦ ವಿಷಯಗಳನ್ನು ಪ್ರತಿಪಾದಿಸುತ್ತಾರೆ – ಇದು ಸಹಜವಾದ ಗುಣ.  ಹಾಗಾಗಿ ಬ್ಲಾಗ್ ಆಕ್ಷನ್ ಡೇ ನವರು ತಾವೇ ಒಂದು ವಿಷಯವನ್ನು ಇತ್ತು, ಇದರ ಬಗ್ಗೆ ತಮ್ಮ ತಮ್ಮ ಬ್ಲಾಗುಗಳಲ್ಲಿ ಬರೆಯಬೇಕೆಂದು ವಿನಂತಿಸಿಕೊಂಡಿದ್ದಾರೆ.  ಆ ವಿಷಯವು ಯಾವುದೆಂದರೆ – ಎನ್‍ವೈರನ್‍ಮೆಂಟ್ ಡೇ ಅಥವಾ ಪರ್ಯಾವರಣ ದಿನ.  ಹೆಚ್ಚಿನವರೆಲ್ಲರೂ ಆಂಗ್ಲ ಮಾಧ್ಯಮದಲ್ಲಿ ಬರೆಯುತ್ತಿದ್ದಾರೆ,  ಆದರೆ ಕಸ್ತೂರಿ ಕನ್ನಡದಲ್ಲಿ ಬರೆದು ಕಸ್ತೂರಿಯ ಕಂಪನ್ನು ಜಗತ್ತಿಗೆ ಹರಡುವ ನಿರ್ಧಾರವನ್ನು ಕೆಲವು ಸಹೃದಯರು ಮಾತ್ರ ಮಾಡುತ್ತಿದ್ದಾರೆ.   ಕನ್ನಡವೇ ನರನಾಡಿಗಳಲ್ಲಿ ಹರಿಯುತ್ತಿರುವ, ನಾನು, ಈ ಸಂದರ್ಭದಲ್ಲಿ ಸುಮ್ಮನೆ ಕುಳಿತರೆ ಸರಿಯೇ?  ೪-೫ ತಿಂಗಳುಗಳಿಂದ ಬರಹಕ್ಕೆ ಸಮಯವೇ ಸಿಗುತ್ತಿರಲಿಲ್ಲ.  ಆದರೂ ಈ ಬಾರಿ ಮಾತ್ರ, ಕಛೇರಿಯ ಕೆಲಸವನ್ನು ಕೆಲವು ಕ್ಷಣಗಳವರೆವಿಗೆ ಬದಿಗೊತ್ತಿ, ಬ್ಲಾಗನ್ನು ಬಾಗಿಸಲು ಕುಳಿತಿರುವೆ.   ಈ ವಿಷಯದ ಬಗ್ಗೆ ನನ್ನ ಅನಿಸಿಕೆ ಇಂತಿದೆ:

 

ಪರ್ಯಾವರಣ = ಪರಿ (ಸುತ್ತಲೂ) ಆವರಣ (ಪಸರಿಸಿರುವುದು) – ಎಂದರೆ ನಮ್ಮ ಅಥವಾ ಈ ಜಗತ್ತಿನ ಸುತ್ತಲೂ ಆವರಿಸಿರುವುದು.  ಅದೇನು?  ಆಗಸ, ಗಾಳಿ, ಬೆಳಕು, ನೀರು, ಭೂಮಿ.   ಅಂದರೆ ಇವುಗಳನ್ನೇ ಪಂಚಭೂತಗಳು ಎನ್ನುವರಲ್ಲವೇ? (5 elements) ಕಣ್ಣಿಗೆ ಕಾಣದಿದ್ದರೂ, ಜೀವ ಇರುವುದನ್ನು ತೋರದಿದ್ದರೂ, ತಮ್ಮ ತಮ್ಮ ಪರಾಕ್ರಮವನ್ನು ಸೂಕ್ತ ಸಮಯದಲ್ಲಿ ತೋರಿಸುವ, ಇತರರಿಗೆ ತಮ್ಮ ಇರುವನ್ನು ತೋರ್ಪಡಿಸಬಲ್ಲ ಅಂಶಗಳು.  ಹಲವು ಬಗೆಯ ಪಶು ಪಕ್ಷಿ ಪ್ರಾಣಗಳಿಗೆ ಜೀವಿತವನ್ನು ಕೊಡುವ ಪರಮಾತ್ಮನ ಸ್ವರೂಪ ಎಂದರೆ ತಪ್ಪಾಗಲಾರದು.  ಈ ಪಂಚಭೂತಗಳನ್ನು ನಿಸರ್ಗವೆಂದೂ ಕರೆಯಬಹುದು.

 

ನಿಸರ್ಗ ದೇವರು – ಹೆಚ್ಚಿನವರು ಹೇಳುವ ಮಾತಿದು.  ದೇವರು ಎಂದರೆ ಸರ್ವಶಕ್ತ ಅಥವಾ ಮಾನವನಿಗಿಂತ ಹೆಚ್ಚಿನ ಶಕ್ತಿ ಉಳ್ಳವನು, ತಪ್ಪು ಒಪ್ಪುಗಳನ್ನು ತುಲನೆಮಾಡಿ ತಕ್ಕ ಶಾಸ್ತಿ ಅಥವಾ ಪ್ರತಿಯನ್ನು ನೀಡುವವನು ಎಂದು ತಿಳಿದಿರುವೆ.  ಈ ದಿಸೆಯಲ್ಲಿ ನನ್ನ ಪುಟ್ಟ ಚಿಂತನೆಯನ್ನು ತಮ್ಮ ಮುಂದಿಡುತ್ತಿರುವೆ. 

 

ಈ ನಿಸರ್ಗಕ್ಕೆ ವಿರುದ್ಧವಾಗಿ ಮಾನವನು ನಡೆದುಕೊಳ್ಳುತ್ತಿದ್ದಾನೆ. ನಿಸರ್ಗವನ್ನು ಉಳಿಸಿ, ಬೆಳೆಸುವ ಬದಲು ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಉಳಿಸಿ ಬೆಳೆಸುವತ್ತ ನಡೆಯುತ್ತಿದ್ದಾನೆ.  ಕಾಡು ಕತ್ತರಿಸಿ ಸಸ್ಯರಾಶಿಯನ್ನು ಧ್ವಂಸ ಮಾಡುತ್ತಿದ್ದಾನೆ. ಸಾಗುವಳಿಗೆ ವನ್ಯಸಂಪತ್ತನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ.  ರಸ್ತೆ ನಿರ್ಮಾಣ, ಕಟ್ಟಡಗಳ ನಿರ್ಮಾಣಕ್ಕೆ ನಿಸರ್ಗದ ಬಲಿಯಾಗುತ್ತಿದೆ.    ನಿಸರ್ಗ ಸಂಪತ್ತನ್ನು ಉಳಿಸಿ ಬೆಳೆಸುವ ಬದಲು ಕಬಳಿಸುತ್ತಿದ್ದಾನೆ.  ನಾಳಿನ ಚಿಂತೆಯನ್ನು ಮರೆತು, ಸುಲಭದಲ್ಲಿ ಇಂದು ಹೊಟ್ಟೆ ಹೊರೆದುಕೊಳ್ಳುವುದರೆಡೆಗೇ ಅವನ ಚಿಂತನೆಗಳೆಲ್ಲವೂ ಸಾಗಿದೆ.    ಹೆಚ್ಚು ಹೆಚ್ಚಾಗಿ ವಾಹನಗಳ ಬಳಕೆಯಾಗುತ್ತಿದ್ದು, ನಿಸರ್ಗದತ್ತವಾದ ಇಂಧನದ ಕಬಳಿಕೆಯೂ ಬಹಳ ಹೆಚ್ಚಾಗುತ್ತಿದೆ.  ಹಾಗೆಯೇ ಅದರಿಂದ ವಾಯು ಪ್ರದೂಷಣೆಯೂ ಹೆಚ್ಚುತ್ತಿದೆ.  ಅವನ ಈ ಕೃತಿಗೆ ತಕ್ಷಣದ ಪ್ರತಿಕ್ರಿಯೆಯನ್ನು ನೀಡದ ನಿಸರ್ಗ ತನಗೇನೇನೂ ಕೇಡು ಬಗೆಯದು ಎಂದು ತಿಳಿದಿದ್ದಾನೆ.  ಆದರೆ ಈ ಅನಿಸಿಕೆ ಸುಳ್ಳು ಎಂದು ಈಗಾಗಲೇ ಸಾಬೀತಾಗಿದೆ.  ಹೆಚ್ಚಿನ ಬಿಸಿಲು, ತಡೆಯಿಲ್ಲದ ಮಳೆ, ಪ್ರವಾಹ, ಹಿಂದೆಂದೂ ಎಣಿಸಿರದಷ್ಟಿನ ಹಿಮಪಾತ, ರಸ್ತೆಗಳಲ್ಲಿ ಭೂ ಕುಸಿತ, ಕಟ್ಟಡಗಳ ಕುಸಿಯುವಿಕೆ ಇತ್ಯಾದಿ ಅಕಾಲದ ಪ್ರಕೃತಿ ವೈಪರೀತ್ಯಗಳು ನಿಸರ್ಗದ ಪ್ರತಿಕ್ರಿಯೆಗಳು.  ಆಗಸದಲ್ಲಿ ಆಮ್ಲಜನಕದ ಕೊರತೆ, ಓಝೋನ್ ಪದರದಲ್ಲಿ ಕ್ಷೀಣತೆ, ಸಮುದ್ರವನ್ನು ಅತಿಕ್ರಮಿಸಿ ಕಟ್ಟಡ ಸೇತುವೆಗಳನ್ನು ನಿರ್ಮಿಸುವಿಕೆ, ಖನಿಜ ಸಂಪತ್ತನ್ನು ಹೊರತೆಗೆಯುವ ಸಲುವಾಗಿ ಭುವಿಯನ್ನು ಅಗೆಯುವುದು, ವನ್ಯರಾಶಿಯ ಧ್ವಂಸ ಮಾಡುವಿಕೆ ಇತ್ಯಾದಿಗಳಿಂದ ಪಶು ಪಕ್ಷಿ ಪ್ರಾಣಿಗಳೂ ನಶಿಸಿ ಹೋಗುತ್ತಿರುವುವು.  ಅದಲ್ಲದೇ ಸಮುದ್ರದಲ್ಲಿ ಚಂಡ ಮಾರುತ ಏಳುವುದು, ಅದರ ಮೇಲೆ ಕಟ್ಟಿದ ಕಟ್ಟಡ ಸೇತುವೆಗಳು ತುಕ್ಕು ಇತ್ಯಾದಿಗಳಿಂದ ಶಕ್ತಿಕಳೆದುಕೊಳ್ಳುವುದು, ಪೊಳ್ಳಾದ ಭುವಿಯ ಕುಸಿತ, ರಸ್ತೆಗಳ ಕುಸಿತ, ಮಲಿನ ವಾಯುವಿನಿಂದ ಉಸಿರಾಟದ ತೊಂದರೆ ಇತ್ಯಾದಿಗಳ ಅನುಭವ ಇಂದು ಸರ್ವೇ ಸಾಮಾನ್ಯ.  ಒಂದು ವಿಧದಲ್ಲಿ ನಿಸರ್ಗವು ಮಾನವನ ಮೇಲೆ ಸೇಡು ತೀರಿಸಿಕೊಳ್ಳುವಂತೆಯೇ ಆಗುತ್ತಿದೆ.   

 

ಈ ಸಂದರ್ಭದಲ್ಲಿ ನೆನಪಾಗುತ್ತಿರುವ ಉಕ್ತಿ ಎಂದರೆ –

ಜೈಸಾ ಕರನಿ ವೈಸಾ ಭರನಿ – ಜೊ ಹೆ ಕರತಾ ವೊ ಹಿ ಭರತಾ – ಮಾಡಿದಂತೆ ತುಂಬಿಕೊಳ್ಳುವನು – ಸತ್ಯ ಮಾರ್ಗದಿ ನಡೆದವರು ಸತ್ಯದ ಫಲವನ್ನು ಉಣ್ಣುವರು

ಅಸತ್ಯ ಮಾರ್ಗದಿ ನಡೆದವರು ದುರ್ಗತಿಯನ್ನು ಕಾಣುವರು – ಮಾಡಿದ್ದುಣ್ಣೋ ಮಹರಾಯ

 

ಇದು ಲೋಕ ಸತ್ಯ – ಇದು ನನ್ನ ಅನಿಸಿಕೆ – ನೀವೇನಂತೀರಿ?

 

ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುವುದು.   ಧರ್ಮವೆಂದರೆ ನಡೆ ನುಡಿ.  ನಮ್ಮ ಉಳಿವು ಅಳಿವು ಬೆಳೆವಿಗಿ, ನಿಸರ್ಗವೇ ಧರ್ಮ.  ಅದರ ಅಳಿವು ನಮ್ಮ (ಮಾನವ ಜನಾಂಗ) ಅಳಿವು.  ಅದನ್ನು ಈಗಿರುವಂತೆಯೇ ಉಳಿಸಿ, ಶಕ್ತಿಯುತವಾಗಿ ಬೆಳೆಸಿದರೆ ನಾವೂ ಬೆಳೆವೆವು.  ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ, ಸುಭಿಕ್ಷತೆಯು ತುಂಬಿ ತುಳುಕುವುದು.  ಈ ದಿಸೆಯಲ್ಲಿ ಮುಂದಾಗಲು ಪ್ರಯತ್ನಿಸೋಣವೇ?

*********

 


3 ಟಿಪ್ಪಣಿಗಳು

 1. Aditya said,

  ಅಕ್ಟೋಬರ್ 27, 2007 at 11:06 ಫೂರ್ವಾಹ್ನ

  I really liked ur post, thanks for sharing. Keep writing. I discovered a good site for bloggers check out this http://www.blogadda.com, you can submit your blog there, you can get more auidence.

 2. Deepak said,

  ನವೆಂಬರ್ 12, 2007 at 2:34 ಅಪರಾಹ್ನ

  namaskara,

  Rajyotsavada haagu deepavaliya shubha sandesha bandu talupitu.
  Nimange mattu maneyavarellarigu namma shubhashayagalu.

  Hegiddera.. Nanagantu ittechite biduve illa. Heege purasottu madikondu nimma tanakke bande.

  Environment bagge channagi barediddera..

  deepak

 3. Ashini.g said,

  ಮೇ 7, 2008 at 11:38 ಫೂರ್ವಾಹ್ನ

  Tumba chennagide. e prayatnna vannu bedabede. please hege continue madi. thank U.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: