ವಿಭಾಗಗಳು
collection

ಮಡಿ

ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |

ಮಡಿ ಮಾಡುವ ಬಗೆ ಬೇರುಂಟು  

ಪೊಡವಿ ಪಾಲಕನ ಧ್ಯಾನ ಮಾಡುವುದು |

ಬಿಡದೆ ಭಜಿಸುಮದು ಅದು ಮಡಿಯಾ

ಬಟ್ಟೆಯ ನೀರೊಳಗಿಟ್ಟು ಒಣಗಿಸಿ |

ಉಟ್ಟರೆ ಅದು ತಾ ಮಡಿಯಲ್ಲ || 

ಹೊಟ್ಟೆಯೊಳಗಿನ ಕಾಮಕ್ರೋಧಗಳ |

ಬಿಟ್ಟರೆ ಅದು ತಾ ಮಡಿಯೊ

ಪರಧನ ಪರಸತಿ ಪರನಿಂದೆಗಳನು |

ಜರೆದಹಂಕಾರಗಳನೆ ತೊರೆದು || 

ಹರಿಹರಿಯೆಂದು ದೃಢದಿ ಮನದಲಿ

ಇರುಳು ಹಗಲು ಸ್ಮರಿಸಲು ಮಡಿಯೋ

ಎಚ್ಚರವಿಲ್ಲದೆ ಮಲ ಮೂತ್ರ ದೇಹವ |

ನೆಚ್ಚಿ ಕೆಡಲು ಬೇಡಲೊ ಮನವೆ ||  

ಅಚ್ಚುತಾನಂತನ ನಾಮವ ಮನಗೊಂಡು |

ಸಚ್ಚಿಂತೆಯಲಿರುವುದೆ ಮಡಿಯೊ

ಭೂಸುರರು ಮಧ್ಯಾಹ್ನಕಾಲದಲಿ |

ಹಸಿದು ಬಳಲಿ ಬಂದರೆ ಮನೆಗೆ || 

ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |

ಹಸನಾಗಿ ಉಂಬುವುದು ಅದು ಮಡಿಯೊ?

ದಶಮಿದ್ವಾದಶಿಯ ಪುಣ್ಯಕಾಲದಲಿ |

ವಸುದೇವ ಸುತನ ಪೂಜಿಸದೆ || 

ದೋಷಕಂಜದೆ ಪರರನ್ನು ಭುಜಿಸಿ ಯಮ – |

ಪಾಶಕೆ ಬೀಳ್ವುದು ಹುಸಿಮಡಿಯೊ?

ಸ್ನಾನಸಂಧ್ಯಾನ ಮೊದಲಾದ ಕರ್ಮಗಳೆಲ್ಲ |

ಜ್ಞಾನಮಾನಸುಮ್ಮಾನದಿಂದ || 

ದೀನವಂದ್ಯನ ಸುಜನ ಸಂತರ್ಪಣ |

ಅನುದಿನ ಮಾಡುವುದು ಘನಮಡಿಯೊ

ಗುರು ಹಿರಿಯರ ಹರಿದಾಸರ ನೆನೆದು |

ಚರಣಕೆರಗಿ ಭಯ ಭಕ್ತಿಯಿಂದ || 

ಪರಿಪರಿ ವಿಧದಲಿ ಪುರಂದರವಿಠಲನ |

ನೆರನೆಂಬುವುದು ಉತ್ತಮ ಮಡಿಯೊ

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s