ಜಯಂತನಿಗೆ ಹುಟ್ಟುಹಬ್ಬದ ಶುಭಾಶಯಗಳು

jayanta.jpg

ಹಾತೊರೆವರೆಲ್ಲ ನೋಡಲು ಸ್ವರ್ಗ ನರಕ
ಕೆಲವರ ಜೀವಿತದ ಹಾದಿಯೇ ಇತರರಿಗೆ ನಾಕ
ನಾಕ ನರಕದಿ ಹಾದಿ ಆವುದಯ್ಯಾ?
ಅದಿಹುದೆಲ್ಲೋ ಹೇಗಿಹುದೋ ಎಂಬುದ ತಿಳಿದವರಾರು?

ಸ್ವರ್ಗ ನರಕಗಳ ವರ್ಣಿಸುವರನೇಕ ಮಂದಿ
ದಿಗಂತದಾಚೆ ಇಹುದೆಂದು ತೋರುವರು ನೂರಾರು ಮಂದಿ
ಹಾದಿಯ ತೋರುವರು ಒಬ್ಬಿಬ್ಬ ದರ್ಶಿಗಳು
ಹಾದಿಯ ಮಾಡಿ ಕೈ ಹಿಡಿದು ನಡೆಸುವನೊಬ್ಬನೇ ಎಂದು ನೀನಂದಿ

ಜೀವಿಗೆ ಜೀವನದ ಹಾದಿಯ ತೋರುವ
ಮಾದರಿಯಾಗಿ ಬದುಕ ನಡೆಸುತಿರುವ
ಅದರ ಒಳ ಮರ್ಮವ ತಿಳಿಸುವ ಸಂಜೀವನ
ಸಂವೇದಿಸದೇ ತಿಳಿಯದ ಈತನ ಧರ್ಮ

ಯಾರೀತ?…!

ಎನ್ನ ಬಾಳ ಹಾದಿಯಲೊಮ್ಮೆ ಚುಕ್ಕೆಯಾಗಿ ಬಂದ
ಬೃಹದಾಕಾರ ತಾಳುತಿಹೆನು ನೋಡೆಂದ
ಹೆಬ್ಬಂಡೆಯಾಗಿ ಬೆಟ್ಟವಾಗಿ ಬೆಳೆಯುತಿಹುದು ಪುಟ್ಟ ಚುಕ್ಕೆ
ಹೆದರಿದ ಹಿಮಾಲಯಕೂ ಸಡ್ಡು ಹೊಡೆಯ ಹೊರಟಿದೆ

ದಿಗಂತದಾಚೆಗೂ ಕೈಚಾಚಿ ಹಾದಿಯ ತೋರುವ
ಆರ್ತನಾದದಿ ಕೇಳುಗರಿಗೆ ಕೈ ಹಿಡಿದು ನಡೆಸುವವ
ಅನಂತಕ್ಕೂ ಅಂತ್ಯವ ತೋರಿಸುವ ಅನಂತಾನಂತ
ಇವನಲ್ಲವೇ ನನ್ನ ನೆಚ್ಚಿನ ಮೆಚ್ಚಿನ ಜಯಂತ

ತಿಳಿಯಿತೇ ಈಗ ಯಾರೀತ
ಡಾಕುಟ್ರಪ್ಪ ಜಯಂತ

Advertisements

2 ಟಿಪ್ಪಣಿಗಳು

 1. Deepak said,

  ಮೇ 29, 2007 at 12:04 ಅಪರಾಹ್ನ

  Namaskara Sir..

  Long time no see?? Nanoo kelasa dalli busy agidde..

  Hegiddera? Ellaru soukhyave??
  Besige raje yalli eekade bandidra??

  -deepak

 2. ve1ka2te3sh4 said,

  ಮೇ 31, 2007 at 9:27 ಫೂರ್ವಾಹ್ನ

  ನಿನಗೆ ದೇವರು ಎಲ್ಲ ಸುಖ, ಸೌಭಾಗ್ಯ, ಜ್ಞಾಪಕಶಕ್ತಿ, ಆರೋಗ್ಯ, ಮತ್ತು ಒಳ್ಳೆಯ ಸಂಸ್ಕಾರಗಳು ದೊರೆಯಲಿ. ನೀನು ಭಾರತದ ಸುಪುತ್ರನಾಗಿ ಮೆರಿಯಪ್ಪ. ನಾನು ಯಾರು ಗೊತ್ತಾಯ್ತ ? ಸಂಪದದ ಎಂಕ್ಟೇಸಪ್ಪಜ್ಜ !
  ಇಲ್ಗೂ ಬಂದೆ ನೋಡಪ್ಪ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: