ಮನೋಹರ-ಪೂರ್ಣಿಮಾ ವಿವಾಹಕ್ಕೊಂದು ಉಡುಗೊರೆ

ಮೇ 8 ನೆಯ ತಾರೀಖು ಪುಷ್ಪವೃಷ್ಟಿ ಆಗುವುದಿದೆ

ದೇವಲೋಕದಿಂದ ದೂತರು ದೇವತೆಗಳ ಶುಭ ಹಾರೈಕೆಯನ್ನು ತರುವವರಿದ್ದಾರೆ

ಅಂದು ಕಾನ್ಸಾಸ್ (ಕ್ಯಾತ್ಸಂದ್ರ) ದೊರೆ ಮನೋಹರ ಮತ್ತು ಚಿರಂಜೀವಿ ಹರಿದ್ರಾ ಕುಂಕುಮ ಶೋಭಿತೇ ಪೂರ್ಣಿಮಾರವರ ಪಾಣಿಗ್ರಹಣ ನಡೆಯುವುದಿದೆ.

ಮುಖತಃ ಕಂಡು ಮತ್ತು ಕಾಣದಿರುವ ಸ್ನೇಹಿತರೆಲ್ಲರಿಗೂ ವಿಶೇಷ ಆಮಂತ್ರಣ ಇದೆ ಎಂದು ಹೇಳಿಕೊಳ್ಳಲು ಎನಗೆ ಹೆಮ್ಮೆ ಎನಿಸುತ್ತಿದೆ.

bday_fl.jpg

ಮುಕ್ಕೋಟಿ ದೇವತೆಗಳು ನಭೋಮಂಡಲದಲಿ

ಕಿಕ್ಕಿರಿದು ಕಾಯುತಿಹರು ಆಶೀರ್ವದಿಸಲು

ಬೊಗಸೆಗಳಲಿ ಮದನನ ಪಂಚಬಾಣಗಳು

ಯಾರೀರ್ವರು ಭಾವೀ ಮಹಾ ದಂಪತಿಗಳು?

ನಡೆದಾಡುವ ದೇವರ ಪ್ರೀತಿ ಪಾತ್ರ

ಹಿಡಿದಿಹರು ಸಮಾಜವ ಮುನ್ನಡೆಸುವ ಸೂತ್ರ

ಹುಟ್ಟಿದ ಕುಟುಂಬದಿ ಕಣ್ಣಾಗಿರುವ ಕಣ್ಮಣಿ

ಮನದೊಳಗೆ ನಲಿಯುತಿಹುದು ಚಿಂತಾಮಣಿ

ಮಾತಿನಲೂ ಕೃತಿಯಲೂ ತಂಪೆರೆಯುವರು

ನಾಡಿನ ಹೆಸರ ಉತ್ತುಂಗಕೇರಿಸುತಿಹರು

ಕನ್ನಡಮ್ಮಗೆ ಕೃತಿ ಋಣವ ತೀರಿಸುತಿಹರು

ಕಿರು ಸಮಯದಲೇ ಮನೆ ಮಾತಾಗುತಿಹರು

 

rose9.jpg

ಮಾಸದಲ್ಲೊಮ್ಮೇ ಸಂತರ್ಪಣೆಯ ಬಡಿಸುವ ಚಂದಿರ

ಮನೆ ಮನಗಳ ತಂಪಿಸುವ ಹುಣ್ಣಿಮೆಯ ಸುಂದರ

ಕುಲಕೆ ಪ್ರತಿನಿತ್ಯವೂ ತಂಪನಿತ್ತ ಪೂರ್ಣಿಮಾ

ಕೊಟ್ಟ ಮನೆಯ ನಿತ್ಯ ಬೆಳಗುವ ಅನುಪಮಾ

ಚತುರ್ಭುಜಗಳು ಸೇರಿ ಜಗ ಬಲಪಡಿಸುತಿರಲು

ಪಾಣಿಗ್ರಹಣದಿ ಜನಸ್ತೋಮ ಹರ್ಷೋದ್ಗಾರ ಉಸುರುತಿರಲು

ಮನುಕುಲದೇಳಿಗೆಗೆ ಭದ್ರ ಬುನಾದಿಯಾಗುತಿರಲು

ಹಾಡಿ ಪೊಗಳಿ ಮಾರ್ದನಿಸುತಿಹೆ ಒಕ್ಕೊರಲು

ನಮ್ಮೆಲ್ಲರ ವತಿಯಿಂದ ಸಲ್ಲಲಿ ಶುಭ ಹಾರೈಕೆಗಳು

ಬೇಡುವಾ, ಸರ್ವಶಕ್ತನೀಯಲಿ ಎಲ್ಲ ಶಕ್ತಿಗಳು

ದಂಪತಿಗಳೀಯಲಿ ಜಗಕೆ ಪ್ರೇಮ ಕರುಣೆ ಶಾಂತಿ ಸಹನೆಗಳು

ನೂರ್ಕಾಲ ಬಾಳಿ ನಂಬಿದವರಿಗೆ ಕೊಡಲಿ ಬದುಕುಗಳು

roses.jpg

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: