ಸ್ಮೆರಾ ಹುಟ್ಟು ಹಬ್ಬಕ್ಕೆ ಶುಭ ಹಾರೈಕೆಗಳು

ಇಂದು ಫೆಬ್ರವರಿ ೧೨ನೆಯ ತಾರೀಖು – ಸ್ಮೇರಾ ಮೊದಲ ಹುಟ್ಟುಹಬ್ಬ.

ಸ್ಮೆರಾ? ಯಾರೂಂತ ಗೊತ್ತಿಲ್ವಾ? ಶ್ರೀಯುತ ಮೋಹನ್ ಮತ್ತು ಶ್ರೀಮತಿ ಹ|ಕುಂ|ಶೋ ಶಾಲಿನಿಯವರ ಏಕೈಕ ಪುತ್ರಿ.

ಈ ಪುಟ್ಟಮ್ಮನಿಗೆ ನಮ್ಮ ಕುಟುಂಬದ ವತಿಯಿಂದ ಒಂದು ಪುಟ್ಟ ಉಡುಗೊರೆ ನೀಡಬಯಸುವೆವು.

smera1.JPG

ಲಾಡಲೀ ಸೋನೀ ಸ್ಮೇರಾ
ತೂ ಹೀ ತೋ ಮೇರಾ
ಯೂ ಲಿವ್ ಲಾಂಗ್ ಲಾಂಗ್ ಎರಾ
ರಾ ರಾ ರಾ ರಾ ರಾ ಸ್ಮೇರಾ

ಮುಟ್ಟಿದರೆ ನಾ ನಿನ್ನ ಜುಟ್ಟು
ನಿನಗ್ಯಾಕೆ ಅಷ್ಟೊಂದು ಸಿಟ್ಟು
ನೀನಲ್ಲವೇನೇ ನನ್ನ ಪುಟ್ಟ ಮರಿ
ಕಾಲಿಟ್ಟ ಮನೆಗೆ ನೀನಾಗುವೆ ಸಿರಿ

ಅಂದು ನೀ ಹುಟ್ಟಿದ ದಿನ ಮನೆಯಲ್ಲೆಲ್ಲ ನಲಿವ ದಿನ
ಇಂದು ವರುಷವಾಗುತ ನೀ ತುಂಬುತಿಹೆ ಎಲ್ಲರ ಮನ
ಭುವಿಗೆ ಬಂದಂದಿನಿಂದ ಮನೆಯಾಯಿತು ಪಾವನ ಪುನೀತ
ನೀನೀಗ ತಯಾರಾಗಿಹೆ ಕದಿಯಲಾ ನವನೀತ

ಅಂದು ಮನಕಾನಂದ ನೀ ಬೋರಲು ಬೀಳಲು
ಮುಂಬರಲು ದೇಕಲಾಗದೇ ಅಮ್ಮನಿಗೂ ತರಿಸಿದೆ ಅಳಲು
ಇಂದು ನೀ ಹಿಡಿದಿಹೆ ಕರದಲಿ ಕೃಷ್ಣನಾ ಕೊಳಲು
ವಂಶದ ಆಲದ ಮರದಿ ಬೇರೂರುತಿದೆ ಇನ್ನೊಂದು ಬಿಳಲು

ಮನೆಯಲ್ಲೆಲ್ಲಾ ಇಡುತಿಹೆ ಪುಟ್ಟ ಪುಟ್ಟ ಹೆಜ್ಜೆ
ಇಂದು ತೆಗೆಯುವವರು ಅಂದು ಹಾಕಿದಾ ಗೆಜ್ಜೆ
ಇನ್ನು ತಡೆಯಲಾರರು ನಿನ್ನ ತುಂಟಾಟ
ಕೆಲವೊಮ್ಮೆ ನೀ ಬಾಯಿ ಬಿಟ್ಟರೆ ಎಲ್ಲರಿಗೂ ಪ್ರಾಣಸಂಕಟ

ನಿನ್ನಪ್ಪ ತಂದಿತ್ತಿಹರು ಬಣ್ಣ ಬಣ್ಣದ ಚೊಣ್ಣ ಷರಾಯಿ
ನಿನ್ನಂದಕೆ ನೋಡುಗರೆಲ್ಲ ಬಿಡುತಿಹರು ಬಾಯಿ ಬಾಯಿ
ಕುಟುಂಬದಿ ಶ್ರೀಕೃಷ್ಣನ ಲೀಲೆಯ ನೀ ತೋರು
ತೊದಲ್ನುಡಿಯಲೇ ಜಗದ ಜಾಲವ ನೀ ಸಾರು

ಪರಶಿವನು ಎಂದಿಗೂ ನಿನ್ನ ಕಾಯುವ
ಉಚ್ಛ ಏಳಿಗೆಗಾಗಿ ನಾವೆಲ್ಲ ಇಂದು ಬೇಡುವ
ಆಯುರಾರೋಗ್ಯ ಅಭಿವೃದ್ಧಿ ಬರಲಿ ನಿನ್ನ ಪಾಲಿಗೆ
ನಿನ್ನಿಂದಾಗಲಿ ಎಲ್ಲರೂ ಹಾತೊರೆಯುವ ಏಳಿಗೆ

Advertisements

4 ಟಿಪ್ಪಣಿಗಳು

 1. Srinagesh said,

  ಫೆಬ್ರವರಿ 12, 2007 at 9:24 ಫೂರ್ವಾಹ್ನ

  vishaya thilisiddakke dhanyavaadagalu. padya preethiya abhivyakthiyaagi sogasaagi bandide!

 2. Narayan said,

  ಫೆಬ್ರವರಿ 12, 2007 at 9:47 ಫೂರ್ವಾಹ್ನ

  Padya bahala sogasaagide sir… 🙂

 3. Jayanth said,

  ಫೆಬ್ರವರಿ 12, 2007 at 10:38 ಫೂರ್ವಾಹ್ನ

  bahaLa chennagide!!!

 4. Mohan said,

  ಫೆಬ್ರವರಿ 12, 2007 at 10:49 ಫೂರ್ವಾಹ್ನ

  Nimma preetige chiraruni aagiruvevu. DhanyavaadagaLu ellarigu. Padya sooperu.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: