ಪಾಪು ಹು.ಹ.ಕ್ಕೊಂದು ಉಡುಗೊರೆ

vinaysb.JPG

ಇವನೊಬ್ಬ ಪಡಪೋಶಿ ಗುಂಡ

ಮನೆಯವರ ಆಡಿಸುವ ಪುಂಡ

ಕೆಲವೊಮ್ಮೆ ಇವನ ತುಂಟಾಟದಿ ನಾ ತೆರಬೇಕು ದಂಡ

ಆದರೂ ಕೂಳಿಗೇ, ಮನೆಗೆ ಅಲ್ಲ ದಂಡ

 

ಅಮ್ಮನಿಗೆ ಮುದ್ದಿನ ಕಣ್ಮಣಿ

ಅಕ್ಕನಿಗೆ ಆಟಕೆ ಇರುವ ಮೊದ್ದುಮಣಿ

ಗಂಡಸಾಗಿ ನನಗೆ ಸಡ್ಡು ಹೊಡೆಯುವಲು ಹವಣಿಸುವ

ಪತ್ನಿ ಹೇಳುವಳು ನೀವು ಸುಮ್ನಿರಿಅದಿನ್ನೂ ಮಗು

 

ಕೈ ಮಾಡಲು ಹಾಕುವ ಕರಾಟೆ ಪಟ್ಟು

ವಿಸ್ಮಯ ಮೂಡಿಸುವ ಇವನೇನಾ ನನ್ನ ಪುಟ್ಟು

ನೀರಿಗಿಳಿಯಲು ಮೇಲೇರಲು ಬಾರದವ ನಾನು

ಮೀನಿನಂತೆ ಈಸಿ ಎನ್ನ ಛೇಡಿಸುವ ಇವನು

rose8.jpg

ತುಂಟಾಟದಲಿ ಇವನದೇ ಎತ್ತಿದ ಕೈ

ಇವನ ಹೊಡೆತಕೆ ತುರಿಸಿಕೊಳ್ಳಬೇಕು ನಾ ಮೈ

ಓದು ಬರಹದಲಿ ಅಮ್ಮನಿಗೆ ಹೆದರುವ

ಆಗಲಾದರೂ ನನ್ನಿಂದ ದೂರವಿರುವ

 

ಆದರಿನ್ನೂ ಇವ ಸಣ್ಣ ಮಗು

ಮಲಗಿರಲು ಇವನದಿಲ್ಲ ಕೂಗು

ಕಾಣುವನಾಗ ದೇವನಪರಾವತಾರ

ನನಗೂ ಮುದ್ದಾಗಿಹ ಈ ಕುವರ

 

ಇವನಿಗಿಂದು ಹುಟ್ಟಿದ ದಿನ

ಇವನ ಒಳಿತಿಗಾಗಿ ಹಾರೈಸೋಣ

ಸರ್ವಶಕ್ತನಲಿ ನಾ ಸಲ್ಲಿಸುವೆ ವಿಶೇಷ ಪ್ರಾರ್ಥನೆ

ಸಮಾಜದಲಿ ಇವನಿಗೆ ಸಿಗಲಿ ಮನ್ನಣೆ

 

Advertisements

4 ಟಿಪ್ಪಣಿಗಳು

 1. ಜಯಂತ said,

  ಡಿಸೆಂಬರ್ 19, 2006 at 6:31 ಫೂರ್ವಾಹ್ನ

  ವಿನಯ್, ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.

  ತವಿಶ್ರಿ ಸಾರ್, ಮಗನ ಮೇಲೆ ಬಹಳ ಚೆನ್ನಗಿ ಬರೆದಿರುವಿರಿ.
  –ಜಯಂತ

 2. Soni said,

  ಡಿಸೆಂಬರ್ 19, 2006 at 7:35 ಫೂರ್ವಾಹ್ನ

  Dear Vinay ge Huttu Habbada Shubhashayagalu 🙂 Devru oLLedu madli.

  Srinivas: Kavana thumba chennagi rachisiddiri….

 3. Avi said,

  ಡಿಸೆಂಬರ್ 19, 2006 at 2:33 ಅಪರಾಹ್ನ

  ಶ್ರೀನಿವಾಸರೆ,

  ವಿನಯ್‌ಗೆ ಹುಟ್ಟುಹಬ್ಬದ ಶುಭಾಶಯ.

  ಕವನ ಚೆನ್ನಾಗಿದೆ.

  ನಿಮ್ಮತ್ತ ಮತ್ತದೇ….ಕೈ ಚಾಚುತ್ತಿದ್ದೇನೆ…

  ಬರಲಿ ಮೈಸೂರು ಪಾಕು, ಜಿಲೇಬಿ ಹೋಳಿಗೆ
  ಅವುಗಳ ಮೂಲಕ ತುಂಬಿರಿ ನಮ್ಮಯ ಜೋಳಿಗೆ
  ವಿನಯನಿಗೆ ಆಗಲಿ ಏಳಿಗೆ !!!

 4. sritri said,

  ಡಿಸೆಂಬರ್ 19, 2006 at 7:57 ಅಪರಾಹ್ನ

  ವಿನಯನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ದೇವರು ಅವನಿಗೆ ಆಯುರಾರೋಗ್ಯಗಳನ್ನು ಕರುಣಿಸಲಿ ಎಂದು ಹಾರೈಸುವೆ. ಎಷ್ಟು ವರ್ಷ ತುಂಬಿತು ಅವನಿಗೆ?

  “ಮಲಗಿರಲು ಇವನದಿಲ್ಲ ಕೂಗು

  ಕಾಣುವನಾಗ ದೇವನಪರಾವತಾರ” – ಈ ಹೋಲಿಕೆ ತುಂಬಾ ಹಿಡಿಸಿತು. ಎಲ್ಲಾ ಮಕ್ಕಳಿಗೂ ಚೆನ್ನಾಗಿ ಅನ್ವಯವಾಗುತ್ತದೆ 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: