ಪುಟ್ಟಿ ಭಾವನಾಳಿಗೊಂದು ಹುಟ್ಟುಹಬ್ಬದ ಉಡುಗೊರೆ

ಇಂದು ನನ್ನ ಇನ್ನೊಬ್ಬ ಪುಟ್ಟಿ, ಕುಮಾರಿ ಭಾವನಾಳ ಹುಟ್ಟಿದದಿನ.   ಅವಳಿಗಾಗಿ ಈ ಒಂದು ಪುಟ್ಟ ಕಾಣಿಕೆಯನ್ನು ನೀಡಬಯಸುವೆ.

 

                       rose91.jpg

ಕರುಣೆ ವಾತ್ಸಲ್ಯ ಊಡಿಸಿದ ಶಿವೆಯ ಸತಿ ಗಿರಿಜೆ

ಆಡಿಸಿ ಪಠಿಸಿ ಬೆಳೆಸುತಿಹ ಸೃಷ್ಟಿಕರ್ತನ ಪಿತ ಪುರುಷೋತ್ತಮ

ನಂದಗೋಕುಲದ ನಲಿ ಬ್ರಹ್ಮನ ಸತಿ ಮಾನಸಿಜೆ ಭಾವನಾ

ಎಲ್ಲ ಗುಣಗಳ ಪ್ರತೀಕ ತ್ರಿಮೂರ್ತಿ ರೂಪಗಳ ಸಮ್ಮಿಲನ

 

                               rose1.jpg

ಕಡು ಕಷ್ಟದ ಕಾಯಕದಿ ಕೈ ಹಾಕುತಿಹ ಪುಟ್ಟ ಅಭಿಯಂತೆ

ಸುಳ್ಳು ತಟವಟಗಳಿಯರಿಯದ ಸಂಜಾತೆ

ಸತ್ಯ ಮಾರ್ಗದಿ ನೇರ ನಡೆಯುತಿಹ ಸಂಭಾವಿತೆ

ಹೋದಲ್ಲೆಲ್ಲಾ ಸೃಷ್ಟಿಸುವಳು ಸ್ನೇಹ ಸಮ್ಮಿಲನದ ಸಂತೆ

 

                               rose7.jpg

ಅಂದು ಪುಟ್ಟ ಪುಟ್ಟ ಹೆಜ್ಜೆ ಇಟ್ಟಳು ಮನೆಯಲ್ಲೆಲ್ಲಾ

ಮುಂದೆ ದಾಪುಗಾಲಿನ ಗುರುತು ಛಾಪಿಸುವಳು ವಿಶ್ವದಲ್ಲೆಲ್ಲಾ

ಮಾತು ಬರುವ ಮೊದಲೇ ತಿಳಿದಿದ್ದಳು ದ್ರಾಕ್ಷಿಯ ಡಬ್ಬಿ 

ಎರಡೂ ಬೊಗಸೆಯ ತುಂಬಿ ತುರುಕಿದಳು ಹೊಟ್ಟೆಯೊಳಗೆ

 

                                rose9.jpg

ನೋಟದಿ ತೋರುವಳು ನಿಶ್ಶಕ್ತ ಬಾಲೆ

ತರಲೆಗಳಿಗೆ ತೋರಿಸುವಳು ಬಿಸಿ ಕೋಲೆ

ಮುದ್ದಿನ ಈ ಮಗಳ ಹಾದಿಯಲಿ ಇರಲಿ ಹೂ ಪಕಳೆಗಳು

ಸರ್ವಶಕ್ತನು ತುಂಬಲಿ ಎಲ್ಲ ವಿಧದ ಶಕ್ತಿಗಳು

 

                                              roses.jpg

ನೂರ್ಕಾಲ ಬಾಳಿ, ನಿನ್ನ ನಂಬಿದವರೆಲ್ಲರನೂ ಬದುಕಿಸು ಮಗಳೇ!  ಈ ದಿಸೆಯಲ್ಲಿ ಆ ಸರ್ವಶಕ್ತನು ನಿನ್ನನ್ನು ಸಿರಿವಂತಳನ್ನಾಗಿಸಲಿ.  ಇದೇ ಆತನಲ್ಲಿ ನನ್ನ ಇಂದಿನ ಪ್ರಾರ್ಥನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: