ಸಹಧರ್ಮಿಣಿಗೊಂದು ಪುಟ್ಟ ಕಾಣಿಕೆ

ಇನ್ನೊಂದು ಹುಟ್ಟುಹಬ್ಬ ನನ್ನ ಸಹಧರ್ಮಿಣಿಯದ್ದು. 19ವರ್ಷಗಳ ಕಾಲ ಅನವರತ ನನ್ನ ಕುಟುಂಬಕ್ಕೆ ಶ್ರೀಗಂಧದಂತೆ ತನ್ನನ್ನೇ ತೇಯ್ದು, ಏಳ್ಗೆ ಬಯಸುತ್ತಿರುವ ಸಹೃದಯಿಗೆ ಒಂದು ಪುಟ್ಟ ಉಡುಗೊರೆ

ಮನೆಯಲ್ಲಿಯೂ ನಾವಿಡುವ ಹೆಜ್ಜೆ ಹೆಜ್ಜೆಯಲ್ಲಿಯೂ ಸುಗಂಧ ಬೀರಲು,
ತನ್ನನ್ನೇ ತಾನು ಶ್ರೀ ಗಂಧದಂತೆ ತೇಯ್ದು, ನಮ್ಮಗಳ ಮೂಲಕ
ಜಗತ್ತಿಗೇ ಬೆಳಕು ಸುವಾಸನೆ ಬೀರುತಿಹ
ನಮ್ಮೆಲ್ಲರಿಗೆ ಉತ್ತಮ ಹೆಸರು ಬರುವಂತೆ ಮಾಡುತ್ತಿರುವ
ಮಕ್ಕಳ ಮಹಾತಾಯಿಯ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದೊಂದು ಪುಟ್ಟ ಕಾಣಿಕೆ

ಬಾಳಲಿ ಬಂದಳು ಮಹಾಮಾಯೆ
ಸಿಲುಕಿಸಿದಳು ಕನಸಿನ ಲೋಕದಿ
ತೋರಿದಳು ಬಣ್ಣ ಬಣ್ಣದ ಕಾಮನಬಿಲ್ಲು
ಊದಿದಳು ನನ್ನ ಹೃದಯದಲಿ ಪುಗ್ಗ

ನನ್ನ ಪಗಡೆಯಾಟದಲಿ ಕಾಯಿಯಾಗಿ
ನಾನಾಡಿದ ಆಟಗಳಿಗೆ ಬಲಿಯಾಗಿ
ರೋಸದೇ ಸೀದದೇ ಕರಕಾಗದೇ
ಮೃದುವಾಗಿ ಹದವಾಗಿ ಬೇಯಿಸುತಿಹಳು

ಮುದ್ದಾದ ಕಂದಗಳ ಹೊತ್ತು ಹೆತ್ತು ಇತ್ತು
ತನು ಮನಗಳ ತಣಿಸಿದ ಮಕ್ಕಳ ತಾಯಿ
ಮನೆಯ ಸಿಂಗರಿಸಿ ಅಲಂಕರಿಸಿದ ಗೃಹಿಣಿ
ಚೊಕ್ಕವಾಗಿಸಿದ್ದು ಚಿಕ್ಕ ಪುಟ್ಟ ಭರಣಿ

ಕಂಡ ಕಾಣದ ದೇಗುಲಗಳ ಹೊಕ್ಕು
ಹೇಳದ ಕೇಳದ ದೇವರುಗಳ ಪೂಜಿಸಿದ
ಉಪವಾಸ ವ್ರತಗಳ ನಿತ್ಯವಾಗಿಸಿದ
ಮನೆಯ ಒಳಿತಿಗಾಗಿ ಶ್ರಮಿಸಿದ

ಮಕ್ಕಳಿಗೆ ಮಮತೆಯೂಡಿಸದ ತಾಯಿ
ಆಟ ಪಾಠಗಳ ಕಲಿಸಿದ ಗುರುವು
ಜೀವನದ ಹಾದಿಯ ತೋರಿದ ಮಾತೆ
ನನಗೂ ತೋರಿದಳು ಇವಳು ಮಹಾಮಾತೆ

ಜೀವ ಜ್ಯೋತಿ ಸಲಹಿದ ಹೃದಯಪ್ರಿಯೆ
ಇಂದು ಬಾಳಲಿ ಆಗಿಹಳು ಮಹಾತಾಯೆ
ಮಕ್ಕಳಾದಿಯಾಗಿ ಪ್ರೀತಿಸುವ ಜೀವ ಒರತೆ
ಎಂದೂ ನಂದದಿರಲಿ ವಂಶದ ಹಣತೆ

ಆ ದೇವಿಯ ಆರತಿಯೊಂದಿಗೆ ಹಬ್ಬದಾಚರಣೆ –

durge1.JPG

ಜಗಜನನೀ ಜಗಜಾನೀ ಮಹಿಷಾಸುರಮರ್ದಿನೀ
ಜಗಜನನೀ ಜಗಜಾನೀ ಮಹಿಷಾಸುರಮರ್ಧಿನೀ
ಜ್ವಾಲಾಮುಖೀ ಚಂಡೀ ಅಮರಪದದಾನೀ
ಜ್ವಾಲಾಮುಖೀ ಚಂಡೀ ಅಮರಪದದಾನೀ
ದಯಾನೀ ಭವಾನೀ ಮಹಾವಾಕ್ ವಾಣೀ
ಸುರನರಮುನಿಜನಮಾನೀ ಸಕಲ ಬುಧಜ್ಞಾನೀ
ದಯಾನೀ ಭವಾನೀ ದಯಾನೀ ಭವಾನೀ

Advertisements

4 ಟಿಪ್ಪಣಿಗಳು

 1. Shiv said,

  ನವೆಂಬರ್ 7, 2006 at 1:59 ಅಪರಾಹ್ನ

  ತವಿಶ್ರೀಗಳೆ,

  ನೀವು ಬರೆದ ಕವನ ಓದಿದ ಮೇಲೆ ಖಂಡಿತವಾಗಿಯೂ ನಿಮ್ಮ ಮೇಲೆ ನಿಮ್ಮ ಶ್ರೀಮತಿಯವರಿಗೆ ೧-೨ ಕೆ.ಜಿಯಾದರೂ ಪ್ರೀತಿ ಜಾಸ್ತಿಯಾಗಿರುತ್ತೆ !

  ಮಾಯಮಾತೆ ಅಂತಾ ಕರೆದಾಗ ಯಾಕೋ ಪರಮಹಂಸರ ನೆನಪಾಯಿತು…

  ನಿಮ್ಮ ಪತ್ನಿಯವರಿಗೆ, ನಮ್ಮ ಕಡೆಯಿಂದ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿ..

 2. Ramesh said,

  ನವೆಂಬರ್ 7, 2006 at 9:08 ಅಪರಾಹ್ನ

  ತವಿಶ್ರೀ,

  ಎಶ್ಟೊ ದಿವಸದ ನಂತರ ನಿಮ್ಮ ಕವನ ಓದ್ತ ಇದ್ದಿನಿ. ಒಳ್ಳೆ ಉಡುಗೊರೆ ನಿಮ್ಮ ಶ್ರೀಮತಿಯವರಿಗೆ.
  ನನ್ನ ಕಡೆ ಇಂದಲು, ಜನುಮ ದಿನದ ಶುಭಾಶಯ ತಿಳಿಸಿಬಿಡಿ.

  ಇಂತಿ
  ಭೂತ

 3. Anveshi said,

  ನವೆಂಬರ್ 8, 2006 at 8:00 ಅಪರಾಹ್ನ

  ಶ್ರೀನಿವಾಸರೆ,
  ನಿಮ್ಮ ಶ್ರೀಮತಿಯವರಿಗೆ ನಮ್ಮ ಶುಭಾಶಯ ತಿಳಿಸಿಬಿಡಿ.

  ಮತ್ತು ಜನ್ಮ ದಿನಕ್ಕೆ ಮನೇಲಿ ಏನೇನೆಲ್ಲಾ ಮಾಡಿದ್ದಾರೋ…. ಅದನ್ನೆಲ್ಲಾ ಪ್ಯಾಕ್ ಮಾಡಿ ಕಳುಹಿಸಲು ತಿಳಿಸಿ. ಗಟ್ಟಿಯಾಗಿ ಪ್ಯಾಕ್ ಮಾಡಲು ಹೇಳಿ… ಇಲ್ಲವಾದರೆ, ದಾರಿಯಲ್ಲೆಲ್ಲಾದರೂ ಕಳೆದು ಹೋದೀತು….

 4. ನವೆಂಬರ್ 9, 2006 at 9:29 ಅಪರಾಹ್ನ

  ಶಿವಶಂಕರ, ರಮೇಶ ಮತ್ತು ಅನ್ವೇಷಿಗಳಿಗೆ ವಂದನೆಗಳು. ಪ್ಯಾಕ್ ಮಾಡಿ ಕಳುಹಿಸಿರುವೆ. ಮೇಲೆ ಸ್ವಲ್ಪ ಡಿಡಿಟಿ ಹಾಕಿರುವೆ. ಇಲ್ಲದಿದ್ದರೆ ಪೋಸ್ಟ್ ಮ್ಯಾನ್ ಗೆ ಅನುಮಾನ ಬಂದು ತಿಂದಾನು ಅಂತ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: