ಮೋಹನರಿಗೊಂದು ಉಡುಗೊರೆ

ಇಂದು ನನಗೆ ಆತ್ಮೀಯರಾದ ಇಬ್ಬರ ಹುಟ್ಟುಹಬ್ಬಗಳು. ಒಂದನೆಯದು ನನ್ನ ಸ್ನೇಹಿತರಾದ ಮೋಹನ ಸುಬ್ರಹ್ಮಣ್ಯ ಅವರದ್ದು. ಈ ಸುಸಂದರ್ಭದಲ್ಲಿ ನನ್ನ ಕಡೆಯಿಂದ ಅವರಿಗೊಂದು ಪುಟ್ಟ ಉಡುಗೊರೆ.

mohan.jpg
ಸುಲಭದಿ ಗೆಳೆಯರ ಮನ ಗೆಲುವ ಮೋಹನ
ಎಷ್ಟೇ ಹೇಳಲೂ ಗೌಣವಾಗುವುದು ಇವರ ಕಥನ
ಬೆಳಗಾಗಲು ಹಿರಿಯ ಕಿರಿಯರೆನ್ನದೇ ಇವರ ನಮನ
ಎಂದೂ ತೋರ್ಗೊಡರು ಮನದಲಿರುವ ದುಗುಡ ದುಮ್ಮಾನ

ಸಲಿಲವಾಗಿ ವ್ಯವಹರಿಸಬಲ್ಲರು ಸಪ್ತ ಭಾಷೆ
ಈರ್ಷ್ಯೆ ತರಿಸುವಂತಹ ಕುಟುಂಬದ ಮೋಹ ಪಾಷೆ
ಕಟುವಾದ ಸಮಸ್ಯೆಗಳನೂ ಉಪಹರಿಸಬಲ್ಲ ಅಭಿಯಂತ
ನಿರ್ಜೀವ ಕೊರಡು ಕಡು ಕಲ್ಲನೂ ಮಾಡಿಸಬಲ್ಲ ಜೀವಂತ

ಸಕಲ ವಿದ್ಯೆಗಳಲೂ ಪಾರಂಗತ ಈ ಬಹುಮುಖಿ
ಇವರ ಹಿಂದಿರುವ ಶಕ್ತಿ ತಿಳಿಯದ ಪ್ರಾಣಸಖಿ
ಮಿತ್ರ ಮೈತ್ರಿಣಿಯರು ಆಘ್ರಾಣಿಸಲು ಕಾದಿಹ ಸುಗಂಧಿತ ಹೂವು
ನಿಕಟ ವರ್ತಿಯಾಗಲು ಹೇಳ ಹೆಸರಿಲ್ಲವಾವುದು ನೋವು

ಮೋಹನನ ಮಣಿಸಬಲ್ಲ ಮಹಾತಾಯಿ ಮೀರಾ
ತುಂಟ ನಗು ಅಳುವಿನಿಂದ ಇವರ ಮನ ಗೆದ್ದ ಸ್ಮೇರ
ಇಂದಾಗಿಹುದು ಮನೆಯಲಿ ಸಂಭ್ರಮದ ಹಬ್ಬ
ಸಾನ್ನಿಧ್ಯದಿ ನಿರಕ್ಷರ ಕುಕ್ಷಿಯೂ ರಚಿಸಬಲ್ಲ ಕಬ್ಬ

ಶ್ರೀ ಮೋಹನರ ಹುಟ್ಟುಹಬ್ಬ ದಿನದ ಸುಸಂದರ್ಭದಲ್ಲಿ
ಆ ಸರ್ವಶಕ್ತನಲ್ಲಿ ನನ್ನ ಒಂದು ಸಣ್ಣ ಕೋರಿಕೆ.
ಇವರಿಗೆ ಮತ್ತು ಇವರ ಕುಟುಂಬದವರಿಗೆ ಸುಖ ದು:ಖಗಳನು
ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ಕೊಡಲಿ.

ನೂರ್ಕಾಲ ಬಾಳಿ, ನಿಮ್ಮನು ನಂಬಿದವರೆಲ್ಲರನ್ನೂ ಬದುಕಿಸಿ.

flower.JPG

Advertisements

1 ಟಿಪ್ಪಣಿ

  1. Mohan said,

    ನವೆಂಬರ್ 7, 2006 at 1:04 ಅಪರಾಹ್ನ

    ಸ್ನೇಹದ ಕಡಲಿನಲ್ಲಿ ಮುಳುಗಿಸುತ್ತಿರುವ ನಿಮಗೆ ನನ್ನ ಧನ್ಯವಾದ.

    ಹೇಳಲು ಶಬ್ದಗಳೆ ಸಿಗುತ್ತಿಲ್ಲಾ.
    thank you for your wonderful gift. This is by far my best birthday.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: