ಅವಿನಾಶರ ಹುಟ್ಟು ಹಬ್ಬಕ್ಕೊಂದು ಉಡುಗೊರೆ

ಅವಿನಾಶ ಬೈಪಾಡಿತ್ತಾಯ ಅವರ ಹುಟ್ಟಿದ ಹಬ್ಬ ಇದೇ ತಿಂಗಳ 14ನೆಯ ತಾರೀಖಿನಂದು.

ಅವಿನಾಶ

ಈ ಶುಭ ಸಂದರ್ಭದಲ್ಲಿ ಮುಗ್ಧ ಚತುರರಿಗೆ ನನ್ನ ಕಡೆಯಿಂದ ಒಂದು ಉಡುಗೊರೆಯನ್ನು ಕೊಡುತ್ತಿರುವೆ.

ಸುಸಂಕೃತ ಕಲಾವಂತ ತಂದೆ ತಾಯಿಯರ ಕುಡಿ
ಹುಟ್ಟಿದ್ದೊಂದೆಡೆಯಾದರೆ ಬೆಳೆದದ್ದು ಹಲವೆಡೆ
ಹಗಲಿರುಳೂ ಯಕ್ಷಗಾನದ ರಸಾಸ್ವಾದ
ಪತ್ರಿಕೆಯ ಉದ್ಯಮದಲೂ ಹೆಸರಾದ

ಅರಸಿ ಹೋಗುತಿರುವುದು ಪಂಚಮವೇದ
ಮನೆಯ ಆವರಿಸಿಹುದು ವಾಣಿಯ ಪಾದ
ಕೈ ಹಾಕಿದಲ್ಲೆಲ್ಲಾ ಸಿಗುತಿಹುದು ಸುವರ್ಣ ಖನಿ
ಕಟು ಜೀವನಕೆ ಒಗ್ಗಿದವರಿಗೆ ಎಲ್ಲವೂ ಸುಲಭವೆನ್ನಿ

ಹೆಸರಿಗೆ ತಕ್ಕಂತೆ ಚಿರಂಜೀವಿಯಾಗಲಿ ಅವಿನಾಶ
ಎದುರಾಳಿಗೆಂದೂ ಕಟ್ಟಿಟ್ಟ ವಿನಾಶ
ನಗುಮೊಗದಲಿ ಎಂದೂ ಕಾಣದು ಆಕ್ರೋಶ
ಇದ ಪಡೆಯದವರೆಲ್ಲೂ ಅಸೂಯೆ ಪಡುವ ಸನ್ನಿವೇಶ

ನೋವು ದುಃಖಗಳನು ಓಡಿಸುವುದು ಒಂದು ನಿಮಿಷ
ಬೀಳಲಾರರು ಎಂದಿಗೂ ಬಲೆಯ ಆಮಿಷ
ಸತ್ಯವ ಕಾಪಾಡಲು ಹಾಕಿಹರು ಸುಳ್ಳಿನ ಮುಖವಾಡ
ಸರ್ವಶಕ್ತ ಎಂದಿಗೂ ಇವರ ಕೈ ಬಿಡ

ನಾನೆಷ್ಟೇ ಹೇಳೋಕ್ಕೆ ಹೊರಟರೂ ಕಾಲುದಾರಿಯಲ್ಲಿಯೇ ಉಳಿದುಬಿಡುವೆ.  ಇಷ್ಟು ಚಿಕ್ಕ ವಯಸ್ಸಿಗೇ ಅವರು ಜೀವನದಲ್ಲಿ ಕಂಡ ಪರಿ ಪರಿ ಮಜಲುಗಳು, ಹತ್ತಿದ ಮೆಟ್ಟಿಲುಗಳು, ತೃಪ್ತಿಪಡಿಸಿದ ಆತ್ಮಗಳು ಸಾವಿರಾರು.  ಹೆಚ್ಚು ಬರೆಯಲು ನನಗೆ ಪದಗಳೇ ಸಿಗುತ್ತಿಲ್ಲ.

ಈ ಶುಭ ಸಂದರ್ಭದಲ್ಲಿ ಅವಿನಾಶರಿಗೆ ಶುಭವನ್ನು ಕೋರುತ್ತಾ ಆ ಸರ್ವಶಕ್ತನಲ್ಲಿ ನನ್ನ ವಿಶೇಷ ಪ್ರಾರ್ಥನೆ –
ಇವರಿಗೆ ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿಯನ್ನಿತ್ತು, ತನ್ನ ಚಿಣ್ಣರಿಗೆ ಉತ್ತಮ ಹಾದಿ ತೋರುವ ಶಕ್ತಿ ಕೊಡು ದೇವನೇ.

ಗುರುದೇವ ದಯಾ ಕರೊ ದೀನ ಜನೆ

Advertisements

2 ಟಿಪ್ಪಣಿಗಳು

 1. Avi said,

  ಸೆಪ್ಟೆಂಬರ್ 14, 2006 at 8:02 ಫೂರ್ವಾಹ್ನ

  ತುಂಬಾ ತುಂಬಾ ಧನ್ಯವಾದ ಶ್ರೀನಿವಾಸರೆ,

  ಜನ್ಮ ದಿನದ ಆಚರಣೆಯಂತೂ ಹುಟ್ಟಿದಂದಿನಿಂದ ಇರಲಿಲ್ಲ. ನಿಮ್ಮಂಥ ಸಹೃದಯರ ಪರಿಚಯದಿಂದ ಜೀವನವೇ ಬದಲಾವಣೆಯಾಗಿದ್ದು, ಹೊಸ ಉತ್ಸಾಹ, ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸುವಂತೆ ಮಾಡುತ್ತಿದೆ.
  ಮತ್ತೊಮ್ಮೆ ತುಂಬು ಮನದ ಧನ್ಯವಾದ.
  -ಅವಿನಾಶ್

 2. jeethendra said,

  ಸೆಪ್ಟೆಂಬರ್ 23, 2006 at 3:09 ಅಪರಾಹ್ನ

  avinasharige mattu shrinivasarige namskaara
  10 dinada balika avinashge wish madutiddene
  haappy birthday tu avi


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: