ಸುರೇಖಾ ಹು.ಹ

ಚಿರಂಜೀವಿ ಸುರೇಖಾಗೆ ಹುಟ್ಟಿದ ಹಬ್ಬದ ಶುಭಾಶಯಗಳು.  ನೂರ್ಕಾಲ ಬಾಳು ತಾಯಿ, ನಿನ್ನನ್ನು ನಂಬಿದವರೆಲ್ಲರನ್ನೂ ಬದುಕಿಸು.ಈ ಶುಭ ಸಂದರ್ಭದಲ್ಲಿ ನನ್ನ ಕಡೆಯಿಂದೊಂದು ಪುಟ್ಟ ಕಾಣಿಕೆ

ದುರ್ನಾತ ಬೀರುವವರಿಗಿವಳು ಜ್ವಾಲಾಮುಖಿ
ಬಂಧು ಬಾಂಧವರಿಗೆಲ್ಲರಿಗೂ ಹಸನ್ಮುಖಿ
ಲೋಕ ಕಲ್ಯಾಣಕೆ ಹುಟ್ಟಿರುವ ಸುಮಂಗಲಿ
ಕನ್ನಡ ಶತ್ರುಗಳ ಜನ್ಮ ಜಾಲಾಡಲಿ

ಪಕ್ಕದ ಮನೆಯಲಿ ಹುಟ್ಟಿದೀ ಕೂಸು
ಎಲ್ಲರನೂ ತನ್ನವರೆಂದು ತಿಳಿಯುವ ಮುಗ್ಧೆ
ಕನ್ನಡಕಾಗಿ ದುಡಿಯುವಳು ಅಹರ್ನಿಶಿ

ನಂಬಿದವರ ಮಗುವಿನಂತೆ ಕಾಪಾಡುವ ಮಾನುಷೀ

ಅಪ್ಪ ಅಮ್ಮರಿಗೆ ಮುದ್ದಿನ ಸುಕುಮಾರಿ
ವಕ್ರ ದೃಷ್ಟಿಯವರುಗಳಿಗೆ ಹೆಮ್ಮಾರಿ
ವಿದ್ಯಾಮಾತೆಯ ಕರುಣೆ ಹೊಂದಿದ ಅಭಿಯಂತೆ
ಕನ್ನಡ ನಾಡಿಗೆ ಕಿರೀಟವಾಗುವ ಸಿರಿವಂತೆ

ಹಾಡಿ ಹಾಡಿ ಎಲ್ಲರ ಮನ ತಣಿಸುವಳು
ಸ್ನೇಹ ಬೆಳೆಸಿ ಎಲ್ಲರ ಮನದಲಿ ನೆಲಸುವಳು
ಕಾಲಿಡುವ ಮನೆಯೆಂದೂ ಕಾಣುವುದು ಸಮೃದ್ಧಿ
ನಿಸ್ಸಂದೇಹ ಇವಳು ಹೊಂದುವಳು ಅಭಿವೃದ್ಧಿ

ಸುರೇಖಾ ಅನನ್ಯ ಕನ್ನಡ ಅಭಿಮಾನ,
ಎಲ್ಲ ತರಹದವರನ್ನೂ ಸಲಹುವ
ಸಮಾಧಾನಿಸುವ ಶಕ್ತಿ ಹೊಂದಿದ್ದು
ಇನ್ನೂ ದುಪ್ಪಟ್ಟು ಮುಪ್ಪಟ್ಟು ಉಲ್ಬಣಿಸಲಿ.

ಈ ದಿಸೆಯಲ್ಲಿ ಆ ಸರ್ವಶಕ್ತನಲಿ ನನ್ನ
ಇಂದಿನ ಪ್ರಾರ್ಥನೆ – ಸುಖ ದು:ಖಗಳನು ಸಮನಾಗಿ ಸ್ವೀಕರಿಸುವ ಶಕ್ತಿ ಕೊಡು ತಂದೆ

Advertisements

2 ಟಿಪ್ಪಣಿಗಳು

 1. Avi said,

  ಆಗಷ್ಟ್ 24, 2006 at 7:29 ಫೂರ್ವಾಹ್ನ

  ಶ್ರೀನಿವಾಸರೆ,
  ಸುರೇಖಾ ಅನನ್ಯ ಕನ್ನಡ ಅಭಿಮಾನಿ ಅಂದ್ರಲ್ಲಾ…
  ಹಾಗಿದ್ರೆ ನನ್ನದೊಂದು ಶುಭಾಶಯ ತಡವಾಗಿ ಪೋಸ್ಟ್ ಮಾಡಿದೆ ಅಂತ ತಿಳಿಸಿ..

  ಬ್ಲಾಗು ತುಂಬಾ ಚೆನ್ನಾಗಿದೆ.

 2. Ramesh said,

  ಆಗಷ್ಟ್ 25, 2006 at 8:38 ಫೂರ್ವಾಹ್ನ

  ತವಿಶ್ರೀ,

  ಸೊಗಸಾಗಿ ಮೂಡಿಬಂದಿದೆ ಕವನ. ಹು.ಹ. ಇತ್ತು ಅನ್ನೋದೆ ಮರ್ತಿದ್ದೆ. ಸದ್ಯ ನೆನಪಿಸಿದಕ್ಕೆ ಧ.ವಾ. ನಿಮ್ಮ ಕವನಗಳನ್ನ ಓದಿ ಎಷ್ಟೊ ದಿನಗಳಗಿದ್ದವು.

  ಇಂತಿ
  ರಮೇಶ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: