ಆತ್ಮ ಚಿರಾಯು
ಅದಕಿಲ್ಲ ಸಾವು ನೋವಿನ ಅಂಟು
ಆತ್ಮ ಅಪರಂಜಿ
ಲವಲೇಶ ಕಲುಷಿತವಲ್ಲದ ಚಿನ್ನ
ಕಬ್ಬಿಣಕ್ಕೆ ತಗುಲುವುದು ತುಕ್ಕು
ದೇಹಕೆ ಬರುವುದು ಸುಕ್ಕು
ಜಡ ವಸ್ತುಗಳೂ ಕುಗ್ಗುವುದು
ಹಿಗ್ಗು ಕುಗ್ಗು ಅಗೋಚರವಿದು
ಪಂಚಭೂತಗಳಿಗಿಲ್ಲ ರೂಪ
ಆದರೂ ತೋರಿಸುವುದು ಪ್ರತಾಪ
ಗಿಂಡಿ ಹೇಗಿದ್ದರೇನಂತೆ
ಉಳಿಯುವುದು ಆಕಾರದಂತೆ
ಪಂಚಭೂತಗಳಲ್ಲೂ ಆತ್ಮ
ತಿಳಿ ಅದರಲಿರುವುದೇ ಪರಮಾತ್ಮ
ಈ ಜೀವಾತ್ಮಕೆ ಹೊರತಾದುದೆಲ್ಲವೂ ಪರಮಾತ್ಮ
ಅದನು ಅರಿಯುವವನೇ ಮಹಾತ್ಮ
One reply on “ಆತ್ಮ ಚಿರಾಯು”
ಆತ್ಮ……
ಎಂತಹ ವಿಸ್ಮಯಕಾರಿ ಶಬ್ದ..
ಕಣ್ಣಿಗೆ ಕಾಣದ ನಮ್ಮೋಳಗಿನ ಶಕ್ತಿಯೇ ಈ ಅತ್ಮವಲ್ಲವೇ..
ನಮ್ಮ ಈ ಆತ್ಮ ಆ ಪರಮಾತ್ಮನಲ್ಲಿ ಐಕ್ಯವಾದಗಲೇ ಸಿಗುವುದು ಮುಕ್ತಿ..
ತುಂಬಾ ಸುಂದರ ಕವನ