ನನ್ನ ಮೂಲ ತಳುಕಿನ ವಂಶ. ತಳುಕು ಇರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕಿನಲ್ಲಿ. ಚಳ್ಳಕೆರೆಯಿಂದ ಬಳ್ಳಾರಿಯ ರಸ್ತೆಯಲ್ಲಿ ೧೫ ಕಿಲೋಮೀಟರ್ ದೂರದಲ್ಲಿರುವ ಹಳ್ಳಿ.
ನಮ್ಮ ಮನೆಯ ಮಾತು ತೆಲುಗು. ಆದರೂ ಕನ್ನಡ ಭಾಷೆಗೆ ನಮ್ಮ ಕುಟುಂಬದೊಂದಿಗಿರುವ ನಂಟಿನ ಮುಂದೆ ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ. ನನ್ನ ಮೊದಲನೆಯ ದೊಡ್ಡಪ್ಪನವರು ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದ ತಳುಕಿನ ವೆಂಕಣ್ಣಯ್ಯನವರು. ಪ್ರಸಿದ್ಧ ಕಾದಂಬರಿಕಾರರಾಗಿದ್ದ ತ.ರಾ.ಸುಬ್ಬರಾಯರು ಎರಡನೆಯ ದೊಡ್ಡಪ್ಪನವರ ಮಗ, ಅಂದರೆ ನನಗೆ ಅಣ್ಣ. ಇನ್ನೊಬ್ಬ ದೊಡ್ಡಪ್ಪನವರಾದ ತ.ಸು.ಶಾಮರಾಯರೂ ಕನ್ನಡದ ಪ್ರೊಫೆಸರ್ ಆಗಿದ್ದವರು. ಇದು ನನ್ನ ತಂದೆಯ ತಂದೆಯ ಕಡೆಯ ಕನ್ನಡ ಸಾಹಿತ್ಯ ಲೋಕದ ಸಂಬಂಧವಾದರೆ, ನನ್ನ ತಂದೆಯ ತಾಯಿಯ ತಮ್ಮ ಅಂದರೆ ಸೋದರಮಾವನವರಾಗಿದ್ದ ಕನ್ನಡ ಪ್ರೊಫೆಸರ್ ಕೆ.ವೆಂಕಟರಾಮಪ್ಪನವರು ನನಗೆ ತಾತನವರು. ಅವರು ತೆಲುಗುವಿನ ಹಲವು ಪ್ರಸಿದ್ಧ ಗ್ರಂಥಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಾಗೆಯೇ ಹಳಗನ್ನಡದಲ್ಲಿ ಹೆಚ್ಚಿನ ಅಧ್ಯಯನ ಮಾಡಿದವರು. ಇನ್ನು ನನ್ನ ತಂದೆಯ ತಂಗಿಯವರಲ್ಲೊಬ್ಬರಾದ ವಿಶಾಲಾಕ್ಷಿ ದಕ್ಷಿಣಾಮೂರ್ತಿ ನನ್ನ ಸೋದರತ್ತೆ. ಆಕೆಯೂ ಪ್ರಸಿದ್ಧ ಕಾದಂಬರಿಗಾರ್ತಿ.ನನ್ನ ಬಗ್ಗೆ ಹೇಳಬೇಕೆಂದರೆ,ನನ್ನ ಹೆಸರು ತಳುಕು ವಿಶ್ವೇಶ್ವರಯ್ಯ ಶ್ರೀನಿವಾಸ ಎಂದು.
ಹುಟ್ಟಿದ್ದು ಜೋಗದ ಹತ್ತಿರದ ಲಿಂಗನಮಕ್ಕಿಯಲ್ಲಿ (೧೯೬೦ ರ ಮೇ ೨ರಂದು).
ನನ್ನ ತಂದೆಯ ಹೆಸರು ವಿಶ್ವೇಶ್ವರಯ್ಯ ಮತ್ತು ತಾಯಿ ಗಂಗಭಾಗೀರಥಮ್ಮ. ೧೯೭೮ರಿಂದ ೧೯೮೦ ರವರೆವಿಗೆ ಬೆಂಗಳೂರಿನ ಶಂಕರಮಠದ ಶಂಕರ ಸ್ಕೂಲ್ ಆಫ್ ಕಲ್ಚರ್ ನಲ್ಲಿ ವಾಸ. ಅಲ್ಲಿ ಗುರುಗಳ ಸನ್ನಿಹಿತದಲ್ಲಿ ವೇದಾಧ್ಯಯನ ಮಾಡಿದೆ. ಹಾಗೆಯೇ ಆಚಾರ್ಯ ಪಾಠಶಾಲೆಯಲ್ಲಿ ಬಿ.ಕಾಂ. ಪದವಿಗಾಗಿ ಓದಿದೆ. ಬಿ.ಕಾಂ ಪದವಿಯನ್ನು ಮೊದಲ ದರ್ಜೆಯಲ್ಲಿ ೧೯೮೦ರಲ್ಲಿ ಪಡೆದೆ. ಮುಂದೆ ೧೯೮೦ರಲ್ಲಿ ಸ್ವಲ್ಪ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದು ೧೯೮೧ ನವೆಂಬರ್ ನಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸ ಮಾಡಿದೆ.೧೯೮೨ರಲ್ಲಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ನಾಣ್ಯ ಪರೀಕ್ಷಕನಾಗಿ ಸೇರಿದೆ. ೧೯೮೯ರಲ್ಲಿ ಅಸಿಸ್ಟೆಂಟ್ ಮ್ಯಾನೆಜರಾಗಿ ಮುಂಬಯಿಗೆ ವರ್ಗವಾಗಿ ಬಂದೆನು. ೧೯೯೭ರಲ್ಲಿ ಮ್ಯಾನೇಜರಾಗಿ ಬೆಂಗಳೂರಿಗೆ ವರ್ಗವಾಗಿ ಹೋಗಿದ್ದು, ತದನಂತರ, ೨೦೦೨ರಲ್ಲಿ ಮುಂಬಯಿಗೆ ಮರುವರ್ಗವಾಗಿ ಬಂದು, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು.ನಾನೊಬ್ಬ ಸಾಹಿತ್ಯಾಭಿಲಾಷಿ. ನನ್ನ ಬರವಣಿಗೆ ಹೆಚ್ಚಿನದಾಗಿ ಕನ್ನಡದಲ್ಲಿಯೇ ಇರುವುದು. ಬರೆಯುವುದು ನನ್ನ ಹುಚ್ಚುತನಗಳಲ್ಲಿ ಒಂದು. ಅಲ್ಲಿಲ್ಲಿ ಕಥೆ, ಕವನ, ಲೇಖನಗಳನ್ನು ಪ್ರಕಟಿಸುತ್ತಿರುವೆ. ನಾನು ತುಂಬಿಸುತ್ತಿರುವ ಇನ್ನೊಂದು ಬ್ಲಾಗೆಂದರೆ ಮಾನಸವಿನಯ
pragna said,
September 24, 2006 at 2:01 pm
Nimma Blog thumba chennagide.
Nanu nanna hosa dada account open madidenne
kanndalli post madalu kelavu salahegalanu needidare
upayogavadithu
ಸಂತೊಷ್. said,
October 13, 2006 at 2:04 am
ನಮಸ್ಕ್ರಾರ ಶ್ರೀನಿವಾಸ,
ನಿಜ ಹೆಳಬೆಕೆಂದರೆ, ನಾನು ನಿಮ್ಮ ಬ್ಲೊಗಗಳನ್ನು ಜಾಸ್ತಿ ಒದಿಲ್ಲ.
ಸುಮ್ನೆ worpress ನಲ್ಲಿ ಬ್ರೊವಸ ಮಾಡ್ತಾ ಇದ್ದೆ.
ಆದರೆ ನನಗೆ ನಿಮ್ಮ profile ನಲ್ಲಿ ಒಂದು ವಾಕ್ಯ ತುಂಬ ಮೆಚ್ಹುಗೆ ಆಯ್ತು.
ಕನ್ನಡ ಭಾಷೆಗೆ ನಮ್ಮ ಕುಟುಂಬದೊಂದಿಗಿರುವ ನಂಟಿನ ಮುಂದೆ ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ.
ಈ ಮಾತು ಕರ್ನಾಟಕ ದಲ್ಲಿ ಇರುವ ಏಲ್ಲರಿಗು ಅರ್ಥ ಅಗಬೆಕು ಅಂತ ನನ್ನ ಆಸೆ.
ಆಸೆ ಮಾತ್ರ , ಒತ್ತಾಯ ಅಲ್ಲ .
ಯಾಕೆಂದರೆ , ನವು ಏಸ್ಟೂ ದಶಕಗಳಿಂದ ಈ ನಾಡಲ್ಲಿ ಬಾಳಿ ಬದಕ್ಕುತ್ತಾ ಇದ್ದೆವೆ.
ಮುಂಚೆ ನಮ್ಮ ಬಾಷೆ ಯಾವದಾದರು ಇರಲಿ , ಈಗ ನಾವು ಕನ್ನಡವನ್ನು ಮಾತ್ರಬಾಷೆಯಾಗಿ ಮಾಡಿಕೊಂಡು , ವಿಶಾಲ ಕನ್ನಡಿಗರಾಗಿ , ವಿಶಾಲ ಕರ್ನಾಟಕ ಸ್ತಾಪಿಸಬೆಕಾಗಿದೆ.
ಆಯಿತು , ನಿಮ್ಮ ಬ್ಲೊಗ ಬರೆಯುವ ಯಶಸ್ವಿಯಾಗಿ ಮುಂದುವರೆಯಲಿ ಏಂದು ಹಾರೈಸುತ್ತಾ ನನ್ನ ಪತ್ರವನ್ನು ಮುಗಿಸುತ್ತೆನೆ.
ದನ್ಯವಾದಗಳು.
ಸಂತೊಷ್.
vani said,
October 21, 2006 at 11:18 am
namaskAra shrInivAs,
nimma warD^pres bagge tiLidiralilla. bahaLa sogasAgide. nimma dIpAvaLiya bagegina lEkhana mAhiti pUrNavAgide, bhAShe, shaili, vivaraNe bahaLa cennAgide.
bAv^bIc idu, nAnu muMbayiyalli idda kAraNa tiLidittu. adu bhAv^bId athavA bhAvibIc yAvudu sari? tiLisi.
nimma paricayadalli kannaDabhASheya bagegina abhimAna bahaLa cennAgi tiLiyapaDisiddIri.
vishvAsadiMda,
vANi
Ram said,
November 30, 2006 at 5:15 pm
Prithiya Srinivasa Avarige,
Thumba chennagide. Neevu T Venkannayyanavara vamshaja endu tilidu thumba santoshavayitu. Avara bagge, shriman DVG avaru thumba chennagi barediddare.
Nagaraj Achar said,
January 11, 2007 at 1:03 pm
ನಿಮ್ಮ “ನಾವ್ಯಾಕೆ ಹೀಗೆ” ಪದ್ಯ ತುಂಬಾ ಚನ್ನಾಗಿ ಮತ್ತು ಅರ್ಥಪೂರ್ಣವಾಗಿದೆ.
Manjunatha said,
February 9, 2007 at 10:03 am
namaskAra,
taMMa parichaya aaddadu tuMbA saMtOShavAitu.
iShToMdu jana khyAtanAmara hinnele hoMdiruva neevu kannaDakke innoo hechchina koDuge needuvaMtAgali eMdu hAraisuttEne.
Manjunatha.K.S
Veena said,
February 14, 2007 at 7:49 pm
tumba chennagide sir nimma kannada blog.
padhya ellinda ashtond rachisteera antha gottagalla.. olle poem churner neevu!
Keep it going
-Veena Shivanna
Satish joshi said,
March 2, 2007 at 5:01 pm
Nimma Blog thumba chennagide
Keshavamurthy said,
April 7, 2007 at 6:50 pm
ನಮಸ್ಕ್ಕಾರ ಶ್ರೀನಿವಾಸ್ ರವರೆ…ನಿಮ್ಮ ಪರಿಚಯ ನನಗೆ ತುಂಬಾ ಉಲ್ಲಾಸ ಮತ್ತು ಆಸಕ್ತಿ ಹೆಚ್ಚಿಸಿದೆ..ನಿಮ್ಮ ಆಶಿರ್ವಾದ ನನ್ನ ಮೇಲೆ ಸದಾ ಇರಲಿ ಎಂದು ನಾನು ನಿಮ್ಮಲ್ಲಿ ಕೇಳಿಕೋಳ್ಳುತ್ತೇನೆ…
ಇಂತಿ
ಕೇಶವಮೂರ್ತಿ
TSSM said,
April 27, 2007 at 4:45 pm
Namaskara
Neevu Talukina vamshadavarendu keli bahala santoshavaayithu.
T.S.Shamaraya avara ‘mooru talemarugalu’ odidhene.Bahala chennagide. Avara mathu T.S.Venkannaiah navara bagge swalpa bareyutheera?
Dhanyavadagalu.
archana said,
April 30, 2007 at 4:18 pm
wonderful blog!! keep it up!!
H.R.Laxmivenkatesh said,
May 22, 2007 at 7:58 pm
ನಮಸ್ಕಾರ ಶ್ರೀನಿವಾಸರೆ,
ಮುಂಬೈ ನಲ್ಲಿ, ’ ಆಪ್ ಕೊ ಪುರುಸೊತ್ ಮೆ ಬನಾಯ ಹೈ ’ ಎಂದು ಒಳ್ಳೆ ರೂಪವತಿ ಹೆಣ್ಣಿಗೆ, ಸಾಮಾನ್ಯವಾಗಿ ನಮ್ಮ ಪ್ರಿಯೆಗೆ, ಹೇಳುವ ಮಾತು. ನಿಮ್ಮ ಬ್ಲಾಗ್ ನೋಡಿದಮೇಲೆ ನನಗೇಕೋ ಆತರಹ ಹೆಳ್ಬೇಕೇನೊ ಅನ್ನಿಸ್ತಿದೆ ! ಸಿಗೋಣ. ಇದು ಒಳ್ಳೇ ಕಾಮೆಂಟಾ ?
ಹಾ. ನೀವು ಹೇಳಿದ್ರಲ್ಲ. ಟೆಕ್ಸ್ಟೈಲ್ಸ್ ಮೇಲೆ ಏನಾದ್ರು ಬರೀರಿ ಅಂತ. ಅದನ್ನೇ ಮಾಡಿದೀನಿ. ನೋಡಿ ನಿಮ್ಮ ಕಾಮೆಂಟ್ಸ್ ಕೊಡಿ ಸಾರ್. ಇಲ್ಲಿ ಹರಿಯವರಿಗೆ ಬಿಟ್ರೆ ಯಾರ್ಗೂ ಅದ್ರಲ್ಲಿ ಆಸಕ್ತಿ ಇಲ್ಲ ಅಂತ ಕಾಣಿಸ್ತಿದೆ.
ವೆಂಕಟೇಶ್
ಶ್ರೀನಿವಾಸ ಸಿ.ಟಿ. said,
July 13, 2007 at 10:47 pm
ಮಾವ…! ನಿಮ್ಮ ಸ್ಕ್ರಾಪ್ ತುಂಬಾ ಚೆನ್ನಾಗಿದೆ. ಸಾಹಿತ್ಯದ ಗಂಧ ನಿಮಗೂ ಖಂಡಿತ ಬೀಸಿದೆ.
Satish said,
August 2, 2007 at 1:50 am
Nimma blog tumba chennagide. Sumarusala oddidini. Unfortunately I have some constraints due to which I’ve postponed my kannada blog writing. Your blogs are simple, understandable and follow a good narration. Keep up the good work…
Regards,
Satish
dinesh said,
October 10, 2007 at 6:26 pm
nimma blog nodi santhosh aythu…
bharat kumar said,
December 6, 2007 at 10:14 pm
hello sir
i saw your blog its so nice. once visit our kannad website http://www.chitharadurga.com give the feed back
thanking you
bhrath kumar
bharat kumar said,
December 6, 2007 at 10:16 pm
hello sir
i saw your blog its so nice. once visit our kannad website http://www.chitharadurga.com give the feed back
ಶೆಟ್ಟರು (Shettaru) said,
March 7, 2008 at 11:07 am
ನಮಸ್ಕಾರ್ರಿ ಸರ್ರsss…
ನಿಮ್ಮ ಲೇಖನಗಳನ್ನು ಬಹಳಷ್ಟು ಸಾರಿ ಇಗೋ ಕನ್ನಡದಲ್ಲಿ ಓದಿದ್ದೆ, ಪ್ರಮುಖವಾಗಿ ಮುಂಬಯಿ ಲೇಖನಗಳು. ನಿಮ್ಮ ಬ್ಲಾಗ್ ಗೆ ಬಂದಿದ್ದು ಇದೆ ಮೊದಲು, ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ, ಲೇಖನಗಳು ಸೊಗಸಾಗಿವೆ. ನಾನೂ ಕೂಡಾ ಮುಂಬಯಿಯಲ್ಲೆ ಇರೋದು.
ಸ್ನೇಹವಿರಲಿ
ಶೆಟ್ಟರು
sindhu said,
March 28, 2008 at 11:09 am
ta.vi.shree sir,
nim blog parichaya kendasampigeli bandide.
preetiyinda
sindhu
amara said,
April 2, 2008 at 3:02 pm
ಏನಪ್ಪ ಇದು ಗುರುಗೊಳ್ಗೇ ಯದ್ವ ತದ್ವ ರೇಸ್ಪಾನ್ಸು ಬತ್ತಾಯ್ತೆ ….. ಎಲ್ಲಾ ಕೆಂಡಸಂಪಿಗೆಯಮ್ಮನ ಮಹಿಮೆಯಾ?????
ಒಲವಿನಿಂದ
-ಅಮರ
nraj0605 said,
May 4, 2008 at 7:59 pm
¸Ágï, PÀ£ÀßqÀzÀ°è §gÉ0iÉÆÃgÀÄ, NzÉÆÃgÀÄ, CzÀæ®Æè EAl£Éðlß°è…. w½zÀÄ §ºÀ¼À ¸ÀAvÉÆÃµÀªÁ¬ÄvÀÄ.
Raveendra said,
August 27, 2008 at 3:01 pm
Sir,
Nijwaaglu nimma bagge thiLkoLoke kuthoohala ittu…. NImma blog nodi thumba kushi aythu….. Sir…. Nanna punya nim jothe sneha maadirodu annustide….
Nimma kannada abhimaanakke nanna Hats off…. [:)]
R @ V E E
aaa said,
August 27, 2008 at 9:43 pm
ಸಾರ್, ಕನ್ನಡದಲ್ಲಿ ಬರೆಯೋರು, ಓದೋರು, ಅದ್ರಲ್ಲೂ ಇಂಟರ್ನೆಟ್ನಲ್ಲಿ.॒ ತಿಳಿದು ಬಹಳ ಸಂತೋಷವಾಯಿತು.
Saanvi said,
November 4, 2008 at 12:34 pm
namaskara sir
nimma blog nodi kushi aytu ,nimge kannada da bagge iruva askthi nodi tumbane santhosha aytu sir . nimma paricheya agidu nanna bagya sir
Thanks n regards
saanvi
ಡಿ.ಎಸ್.ರಾಮಸ್ವಾಮಿ said,
January 30, 2009 at 7:12 pm
ಪ್ರಿಯರೇ, ಈಗಷ್ಟೇ ಹೊಸದಾಗಿ ನನ್ನ ಬಂಧುವಾದ ಶ್ರೀ ಅರುಣ್ ಅವರಿಂದ ನಿಮ್ಮ ಬ್ಲಾಗಿನ ಪರಿಚಯ ಆಯ್ತು.
ಹೀಗೆ ಆಗೀಗ ಬ್ಲಾಗಿಸುತ್ತಿರೋಣ. ನಮಸ್ಕಾರ.
Dr. Azad said,
June 9, 2009 at 11:44 pm
ನಮಸ್ಕಾರ ಶ್ರೀನಿವಾಸ್ ಸರ್
ಬಹಳ ಘನತೆವೆತ್ತ ಕೌಟುಂಬಿಕ ಹಿನ್ನೆಲೆಯನ್ನು ನಾನು ನೋಡದೇ ನಿಮಗೆ ನನ್ನ ಅನಿಸಿಕೆಗಳನ್ನು ತಿಳಿಸಿದ್ದರೆ ನೈಜವಾಗಿರುತ್ತಿತ್ತು…ಆದರೆ ಈಗ ಮುಜುಗರ ಅನ್ನಿಸುತ್ತಿದೆ ಹಾಗೇ..ನಿಮ್ಮ ಬ್ಲಾಗಿನ ಸಂಪರ್ಕದಲ್ಲಿರಬೇಕೆಂಬ ಬಯಕೆಯಿಂದ ಪ್ರತಿಕ್ರಿಯಿಸಲೇಬೇಕಾಗಿದೆ…
ನನ್ನ ಬ್ಲಾಗ್ ಗೂ ಬನ್ನಿ ಸರ್, ನಿಮ್ಮ ಅಮೂಲ್ಯ ಸಲಹೆಗೆ ಸ್ವಾಗತ….(ನನ್ನ ಮನೆ ಮಾತು…ಉರ್ದು…).
minchulli said,
August 24, 2009 at 4:27 pm
nimma blog kooda ivathu nodide… poorthi oodilla … adaroo oodida ellavoo khgushi kodthu… innu baruve yaavaagalooo