೨೦೦೭ನೇ ಇಸವಿ ಜೂನ್ ೨೪ರ ತೇದಿ ಅಂದರೆ ಇಂದು
ರವಿವಾರ
ಕನ್ನಡ ಆಂಗ್ಲ ಬ್ಲಾಗ್‍ಗಳ ದೊರೆ,
ಬ್ಲಾಗಿಗರೆಲ್ಲರ ಮನೆ ಮಾತಾಗಿರುವ, ಆಗುತ್ತಿರುವ
ಶ್ರೀ ಶಿವಶಂಕರರು, ಚಿ|ಸೌ|ಹ|ಕುಂ|ಶೋ ಶಿಲ್ಪಾ ಶ್ರೀಯವರ ಪಾಣಿಗ್ರಹಣ ಮಾಡಿ
ಹಸೆಯ ಮೇಲೆ ಸಪ್ತಪದಿಯ ತುಳಿದು, ಸಪ್ತಲೋಕವನಾಳುವ ದಿಸೆಯಲ್ಲಿ ಹೊರಡುತ್ತಿರುವ ದಿನ
ಮುಗಿಲ ಮೇಲಿಂದ ಆಗುತಿಹೆ ಪುಷ್ಪವೃಷ್ಟಿ
ಭುವಿಯಿಂದ ಏಳುತಿದೆ ಹೋಮ ಧೂಮ ಸುಗಂಧ
ಸಪ್ತ ಲೋಕಗಳು ಒಂದಾಗಿ ಬೆರೆಯುತಿಹ ಕಾಲ
ಶಿವ ಶಿವೆಯರು ಕೈ ಹಿಡಿಯುತಿಹ ಕಲ್ಯಾಣಲೀಲ
ಶಂಕರರ ಕರದಲಿ ಶುಭ ಕಾರ್ಯದ ಕಂಕಣ
ಶಿವೆಯು ಶ್ರೀಲಲಿತೆಯ ಪೂಜಿಪ ಶುಭದಿನ
ಪಾಣಿಗ್ರಹಣಕೆ ಕಾದಿಹ ಸುಕೋಮಲ ಜೋಡಿ
ನಾವು ನೀವು ಜಂಗುಳಿಯ ಮಧ್ಯೆ ತೂರಿ ಹರಸೋಣ ಬಿಡಿ
ಚತುರ್ಭುಜರು ಕರಪಿಡಿದು ತುಳಿದಿಹರು ಸಪ್ತಪದಿ
ಜನಜಂಗುಳಿ ನೋಡುತಿಹರು ಬೆಕ್ಕಸ ಬೆರಗದಿ
ನೆರೆದಿಹರು ಮುಕ್ಕೋಟಿ ದೇವತೆಗಳು ನಭೋಮಂಡಲದಲಿ
ಹರಸಲು ಕಾದಿಹರು ಪಂಚ ಕೋಟಿ ಕನ್ನಡ ಕಲಿಗಳು
ಸುಜ್ಞಾನ ಅರೆದು ಕುಡಿದ ಬುದ್ಧಿವಂತ
ಅನ್ನದಾತನಿಗೆ ಪ್ರೀತಿಪಾತ್ರ ಅಭಿಯಂತ
ಕನ್ನಡಮ್ಮಗೆ ತೋರುವ ಪ್ರೀತಿ ಅಪರಿಮಿತ
ದೀನರಿಗೆ ಬಾಳು ನೀಡುತಿಹರು ಅನವರತ
ಎರವಲು ತಂದಿಹರು ಆ ಮನೆಯ ಪುಟ್ಟ ದೀಪ
ಕಣ್ಣಿದ್ದವರು ಬಣ್ಣಿಸಲು ಸಾಲದ ದೇದೀಪ್ಯ ರೂಪ
ಉಡಿಯ ತುಂಬಿ ಹೊಸ ಮನೆಯ ಸಿರಿಯ ತುಳುಕಿಸುವುದು
ಪುಟ್ಟ ನಂದಾ ದೀಪ ಜಗವನೇ ಬೆಳಗುವುದು
ಕನ್ನಡಮ್ಮನ ಮತ್ತು ಆಕೆಯ ಮಕ್ಕಳ ಸೇವೆಯೇ
ಜೀವಾಳ ಆಗಿರಿಸಿಕೊಂಡು ನೂರ್ಕಾಲ ಬಾಳಿರಿ
ನಿಮ್ಮನು ನಂಬಿದ ಎಲ್ಲ ಜೀವಿಗಳನು ಬದುಕಿಸಿರಿ
ಆ ಶ್ರೀಹರಿಯ ಕರುಣೆ ನಿಮ್ಮೊಂದಿಗೆ ಸದಾಕಾಲ ಇರಲೆಂದು ನಾ ಬೇಡುವೆನು



Avi said,
June 25, 2007 at 8:06 am
ಶಿವ್ ಅವರಿಗೆ ಮನತುಂಬಿದ ಶುಭ ಹಾರೈಕೆಗಳು
ಕವನ ರೂಪದಲ್ಲಿ ಹಾರೈಸಿದ್ದಕ್ಕೆ ಧನ್ಯವಾದ ಶ್ರೀನಿವಾಸ್.
Rayanna said,
July 4, 2007 at 7:02 pm
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
KannadigaHarsha said,
August 2, 2007 at 1:33 pm
geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !
http://enguru.blogspot.com
- KattEvu kannaDada naaDa, kai joDisu baara !
Shiv said,
August 10, 2007 at 10:53 am
ನಮಸ್ಕಾರ ಗುರುಗಳೇ,
ನಿಮ್ಮ ಪ್ರೀತಿಗೆ ನಿಮ್ಮ ಅಭಿಮಾನಕ್ಕೆ ನಾವಿಬ್ಬರೂ ಅಭಾರಿಗಳು..
ನಿಮ್ಮ ಆಶೀರ್ವಾದವಿರಲಿ ಹೀಗೆ ಸದಾ..