ಹಾತೊರೆವರೆಲ್ಲ ನೋಡಲು ಸ್ವರ್ಗ ನರಕ
ಕೆಲವರ ಜೀವಿತದ ಹಾದಿಯೇ ಇತರರಿಗೆ ನಾಕ
ನಾಕ ನರಕದಿ ಹಾದಿ ಆವುದಯ್ಯಾ?
ಅದಿಹುದೆಲ್ಲೋ ಹೇಗಿಹುದೋ ಎಂಬುದ ತಿಳಿದವರಾರು?
ಸ್ವರ್ಗ ನರಕಗಳ ವರ್ಣಿಸುವರನೇಕ ಮಂದಿ
ದಿಗಂತದಾಚೆ ಇಹುದೆಂದು ತೋರುವರು ನೂರಾರು ಮಂದಿ
ಹಾದಿಯ ತೋರುವರು ಒಬ್ಬಿಬ್ಬ ದರ್ಶಿಗಳು
ಹಾದಿಯ ಮಾಡಿ ಕೈ ಹಿಡಿದು ನಡೆಸುವನೊಬ್ಬನೇ ಎಂದು ನೀನಂದಿ
ಜೀವಿಗೆ ಜೀವನದ ಹಾದಿಯ ತೋರುವ
ಮಾದರಿಯಾಗಿ ಬದುಕ ನಡೆಸುತಿರುವ
ಅದರ ಒಳ ಮರ್ಮವ ತಿಳಿಸುವ ಸಂಜೀವನ
ಸಂವೇದಿಸದೇ ತಿಳಿಯದ ಈತನ ಧರ್ಮ
ಯಾರೀತ?…!
ಎನ್ನ ಬಾಳ ಹಾದಿಯಲೊಮ್ಮೆ ಚುಕ್ಕೆಯಾಗಿ ಬಂದ
ಬೃಹದಾಕಾರ ತಾಳುತಿಹೆನು ನೋಡೆಂದ
ಹೆಬ್ಬಂಡೆಯಾಗಿ ಬೆಟ್ಟವಾಗಿ ಬೆಳೆಯುತಿಹುದು ಪುಟ್ಟ ಚುಕ್ಕೆ
ಹೆದರಿದ ಹಿಮಾಲಯಕೂ ಸಡ್ಡು ಹೊಡೆಯ ಹೊರಟಿದೆ
ದಿಗಂತದಾಚೆಗೂ ಕೈಚಾಚಿ ಹಾದಿಯ ತೋರುವ
ಆರ್ತನಾದದಿ ಕೇಳುಗರಿಗೆ ಕೈ ಹಿಡಿದು ನಡೆಸುವವ
ಅನಂತಕ್ಕೂ ಅಂತ್ಯವ ತೋರಿಸುವ ಅನಂತಾನಂತ
ಇವನಲ್ಲವೇ ನನ್ನ ನೆಚ್ಚಿನ ಮೆಚ್ಚಿನ ಜಯಂತ
ತಿಳಿಯಿತೇ ಈಗ ಯಾರೀತ
ಡಾಕುಟ್ರಪ್ಪ ಜಯಂತ
