ಜನವರಿ 11ನೆಯ ತಾರೀಖು – ಶ್ರೀಮತಿ ಹರಿದ್ರಾ ಕುಂಕುಮ ಶೋಭಿತೇ ಶುಭ ಅರುಣ ಅವರ ಹುಟ್ಟಿದಹಬ್ಬ.
ಇಂದಿನ ಶುಭಸಂದರ್ಭದಲ್ಲಿ ಈ ತಂಗಿಗೆ ನನ್ನದೊಂದು ಪುಟ್ಟ ಉಡುಗೊರೆ.
ಜಗವ ಬೆಳಗಿಸಲು ಆ ನೇಸರನು ಅವಶ್ಯ
ಜೀವಿಗಳಿಗೆ ಚೈತನ್ಯ ತುಂಬಲು ಅರುಣನ ಸಖ್ಯ
ಕಾದು ಬೆಂದು ಹದನಾದ ಆ ಸೂರಜ ಮೂರ್ತಿ
ಆತನ ಸಮಾಧಾನಿಸಲೊಂದೇ ಶುಭ ಪೂರ್ತಿ
ಅನವರತ ಲೋಲೈಸುವ ನಗಿಸಿ ನಗುವ ಶ್ರೀಮಂತೆ
ಮರುಭೂಮಿಯಲೂ ಕಾಣಸಿಗುವ ಮರವಂತೆ (ಸಮುದ್ರತೀರ)
ಪರರೂರಿನಲೂ ಹೆಸರು ಕೆತ್ತುತಿಹ ಧೀಮಂತೆ
ಕನ್ನಡಮ್ಮನ ಹೆಮ್ಮೆಯ ಕುಡಿ ಈ ಅಭಿಯಂತೆ
ನಾಲ್ಕು ಕಂಬದಂತಿಹ ಪ್ರಚಂಡ ಮಕ್ಕಳ ಚಿಕ್ಕಮ್ಮ
ಸದಾ ಹಸನ್ಮುಖಿಯಾಗಿ, ರೋಧನವ ತಿಳಿಯದ ಲೋಲಮ್ಮ
ಸುಲಭದಲಿ ತನ್ನವರನ್ನಾಗಿಸುವ ಮೋಡಿಗಾರ್ತಿ
ತ್ರಿಮೂರ್ತಿ ಲ್ಯಾಪ್‍ಟಾಪುಗಳ ಜೊತೆಗಾರ್ತಿ
ತನ್ನದೇ ಛಾಪನು ಜೀವಿತಗಳಲಿ ಮೂಡಿಸುವ sui generis
ಕಣ್ತೆರೆಯಲು ಕಾದಿಹುದು ಓರ್ಕುಟ್ಟಿಗರಿಗೆ ಇವರ Bon Jour
ಪಂಚ ಭಾಷಾ ತಾರೆಯಾಗಿ ಮಿಂಚುತಿಹಳು
ಇನ್ನೂ ನೂರಾರು ಭಾಷೆಗಳ ಕಲಿಯುವಳು (ನಿಸ್ಸಂದೇಹ)
ಕೋಪಿಸಿದರೂ ಮುದ್ದಿಸಿದ ತಂದೆಯ ಮುದ್ದುಮಗು
ನಲಿವನು ಮೈಗೂಡಿಸಿದ ತಾಯಿಯ ಸೊಬಗು
ಮನ ಮುದುಡಲು ಮೋಡದಂತೆ ಕರಗಿಸುವ ಅಣ್ಣನ ತಂಗಿ
ಉಜ್ವಲಿಸುವಳು ನಂದಾ ದೀಪದಂತೆ ಮನೆಯನು ಸದಾ ಬೆಳಗಿ
ಇಂತಹ ಶ್ರೀಮಂತೆ, ಧೀಮಂತೆ, ಶ್ರೀಮಾತೆಯ ಕೈ ಭದ್ರಪಡಿಸಿ
ಸುಖ ದುಃಖಗಳನು ಸಮನಾಗಿ ಸ್ವೀಕರಿಸುವ ಶಕ್ತಿಯನ್ನಿತ್ತು
ಅಂದುಕೊಂಡದ್ದೆಲ್ಲವೂ ಕರಗತವಾಗುವಂತೆ ಮಾಡಿಸಲು
ಆ ಸರ್ವ ಶಕ್ತನಲಿ ನಾನಿಂದು ಬೇಡುತಿರುವೆ.
ತಾಯೇ! ನೂರ್ಕಾಲ ಬಾಳು, ನಿನ್ನನ್ನು ನಂಬಿದವರೆಲ್ಲರನ್ನೂ ಬದುಕಿಸು.
Joyeux anniversaire
